Latest

ಮಹಿಳೆಯರಿಂದಲೇ ಇನ್ನೋರ್ವ ಮಹಿಳೆಯ ಕಿಡ್ನ್ಯಾಪ್

ಪ್ರಗತಿವಾಹಿನಿ ಸುದ್ದಿ; ಕೋಲಾರ: ಮಹಿಳೆಯರೇ ಇನ್ನೋರ್ವ ಮಹಿಳೆಯನ್ನು ಹಿಗ್ಗಾ ಮುಗ್ಗಾ ಥಳಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿರುವ ಘಟನೆ ಕೋಲಾರದ ಸೋಮಸಂದ್ರ ಗ್ರಾಮದಲ್ಲಿ ನಡೆದಿದೆ.

ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದ್ದು, ಐದು ಜನ ಮಹಿಳೆಯರು 33 ವರ್ಷದ ಕಮಲಮ್ಮ ಎಂಬ ಮಹಿಳೆಯನ್ನು ಥಳಿಸಿ ಕಾರಿನಲ್ಲಿ ಎಳೆದೊಯ್ದಿದ್ದಾರೆ ಎನ್ನಲಾಗಿದೆ.

ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಮಹಿಳೆಯರ ಗುಂಪು ಬಳಿಕ ಆಕೆಯನ್ನು ಅಪಹರಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಡ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೀನಾಕ್ಷಿ, ಶಾಲಿನಿ ಸೇರಿದಂತೆ ಐದು ಮಹಿಳೆಯರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಹಾಸ್ಟೇಲ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Home add -Advt

Related Articles

Back to top button