Latest

9 ತಿಂಗಳ ಮಗುವನ್ನು ಯುವಕನ ಕೈಗಿತ್ತು ಮಹಿಳೆ ನಾಪತ್ತೆ ಪ್ರಕರಣ; ಹೈ ಡ್ರಾಮಾ ಬಯಲು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆಲ ದಿನಗಳ ಹಿಂದಷ್ಟೇ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಯುವಕನ ಕೈಗೆ ಮಹಿಳೆಯೊಬ್ಬರು 9 ತಿಂಗಳ ಮಗುವನ್ನು ಕೊಟ್ಟು ನಾಪತ್ತೆಯಾದ ಪ್ರಕರಣ ವರದಿಯಾಗಿತ್ತು. ಮಗುವಿನ ತಾಯಿ ಹುಡುಕಾಟ ನಡೆಸಿದ ಪೊಲೀಸರು ಖತರ್ನಾಕ್ ಪ್ರೇಮಿಗಳ ಹೈ ಡ್ರಾಮಾ ಬಯಲು ಮಾಡಿದ್ದಾರೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ನಿವಾಸಿ ರಘು ಎಂಬ ಯುವಕ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬಳು ತನ್ನ ಕೈಗೆ ಮಗು ಕೊಟ್ಟು ನಾಪತ್ತೆಯಾಗಿದ್ದಾಳೆ ಎಂದು ಹೇಳಿ ಮೈಸೂರಿನ ಲಷ್ಕರ್ ಠಾಣೆಗೆ ಮಗುವನ್ನು ತಂದು ಒಪ್ಪಿಸಿದ್ದ. ಮಗುವಿನ ತಾಯಿಯ ಹುಡುಕಾಟ ನಡೆಸಿದ ಪೊಲೀಸರು ಇದೀಗ ರಘು ಹಾಗೂ ಆತನ ಮಹಿಳಾ ಪ್ರೇಯಸಿಯ ನಾಟಕ ಬಯಲು ಮಾಡಿದ್ದಾರೆ.

ಮಹಿಳೆ ಹುಡುಕಾಟದ ಜತೆಗೆ ರಘುವನ್ನು ವಿಚರಣೆಗೊಳಪಡಿಸಿದ ಪೊಲಿಸರಿಗೆ ಇಬ್ಬರ ಕಳ್ಳಾಟ ಗೊತ್ತಾಗಿದೆ. ಪತಿಯಿಂದ ದೂರವಾಗಿದ್ದ 9 ತಿಂಗಳ ಮಗುವಿನ ತಾಯಿ ಸಾಮಾಜಿಕ ಜಾಲತಾಣದಲ್ಲಿ ರಘುಗೆ ವರ್ಷದ ಹಿಂದೆ ಪರಿಚಯವಾಗಿದ್ದಾಳೆ. ಆಕೆಯೊಂದಿಗೆ ಪ್ರೀತಿ, ಪ್ರೇಮಕ್ಕೆ ಮಗು ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಇಂಥಹ ನಾಟಕವಾಡಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರಿ ಕಚೇರಿ ಕುರ್ಚಿಯಲ್ಲೇ ಕುಳಿತು ಮದ್ಯ ಸೇವನೆ; ಅಧಿಕಾರಿ ಅಮಾನತು

Home add -Advt

Related Articles

Back to top button