Latest

ಶಾಸಕರಿಂದ ನನಗೆ ಮಗುವಾಗಿದೆ ಎಂದ ಮಹಿಳೆ!

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ಸೇಡಂ ಬಿಜೆಪಿ ಶಾಸಕ ರಾಜ್ ಕುಮಾರ್ ಪಾಟೀಲ್ ವಿರುದ್ಧ ದೌರ್ಜನ್ಯ, ಅನ್ಯಾಯವೆಸಗಿರುವ ಆರೋಪ ಮಾಡಿರುವ ಮಹಿಳೆ, ಶಾಸಕರಿಂದ ನನಗೆ ಮಗುವಾಗಿದೆ ಎಂದು ಆರೋಪಿಸಿದ್ದಾಳೆ.

ಫೇಸ್ ಬುಕ್ ಲೈವ್ ಗೆ ಬಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ವಕೀಲ ಜಗದೀಶ್ ಜತೆ ಫೇಸ್ ಬುಕ್ ಲೈವ್ ಗೆ ಬಂದ ಮಹಿಳೆ, ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ನನಗೆ ಅನ್ಯಾಯ ಮಾಡಿದ್ದಾರೆ. ಅವರಿಂದ ನನಗೆ ಮಗು ಕೂಡ ಆಗಿದೆ. ಕಳೆದ 8 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ನನ್ನ ಮಗನಿಗೆ ಅನ್ಯಾಯ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಆದರೂ ಶಾಸಕರು ನ್ಯಾಯಕೊಡಿಸಿಲ್ಲ ಎಂದಿದ್ದಾಳೆ.

ಅಲ್ಲದೇ ನಿನ್ನೆ ವಿಧಾನಸೌಧ ಠಾಣೆ ಪೊಲೀಸರು ನನ್ನನ್ನು ಠಾಣೆಗೆ ಕರೆತಂದು ಇಡಿ ದಿನಕೂರಿಸಿಕೊಂಡಿದ್ದಾರೆ. ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದರೆ ಮೇಲಿನ ಅಧಿಕಾರಿಗಳಿಂದ ಒತ್ತಡವಿದೆ. ಮೊದಲು ಶಾಸಕರ ವಿರುದ್ಧದ ತನ್ನ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬರೆದುಕೊಡುವಂತೆ ಬೆದರಿಕೆಯೊಡ್ದಿ ಕೂಡಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಉತ್ತರ ಕರ್ನಾಟಕದ ಶಾಸಕರಿಗೆ ಬ್ಲ್ಯಾಕ್ ಮೇಲ್: ಯುವತಿ ಸರಿ ನಾಲ್ವರು ಪೊಲೀಸ್ ಬಲೆಗೆ?

Related Articles

Back to top button