Latest

ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಮಹಿಳಾ ಟೆಕ್ಕಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೆಲಂಗಾಣ ಮೂಲದ ಮಹಿಳಾ ಟೆಕ್ಕಿಯೊಬ್ಬರು ರಾಜಧಾನಿ ಬೆಂಗಳೂರಿನ ಮನೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ 35 ವರ್ಷದ ಶರಣ್ಯ ಮೃತ ಮಹಿಳೆ. ಆಕೆಯ ಸಾವಿಗೆ ಪತಿಯೇ ಕಾರಣ ಎಂದು ಶರಣ್ಯ ಅಪೋಷಕರು ಆರೋಪಿಸಿದ್ದಾರೆ.

Home add -Advt

ಶರಣ್ಯ ತಮ್ಮ ಕ್ಲಾಸ್ ಮೇಟ್ ರೋಹಿತ್ ನನ್ನು ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು, ಮದುವೆಯ ನಂತರ ರೋಹಿತ್ ಕುಡಿದು ಮನೆಗೆ ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಪತಿ ಕಿರುಕುಳ ತಾಳಲಾರದೆ ಶರಣ್ಯ ತಮ್ಮ ತಾಯಿಯ ಮನೆಗೆ ತೆರಳಿದ್ದರು.

ಆದರೆ ಮೂರು ತಿಂಗಳ ಹಿಂದೆ ಶರಣ್ಯಾ ಮನವೊಲಿಸಿ ರೋಹಿತ್ ವಾಪಸ್ ಬೆಂಗಳೂರಿನ ಮನೆಗೆ ಕರೆ ತಂದಿದ್ದ. ಇದೀಗ ಮಗಳು ತನ್ನ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿನ ಹಿಂದೆ ರೋಹಿತ್ ಕೈವಾಡವಿದೆ. ರೋಹಿತ್ ನೇ ತಮ್ಮ ಮಗಳನ್ನು ಹತ್ಯೆ ಮಾಡಿರಬಹುದು ಇಲ್ಲವೇ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿರಬಹುದು ಎಂದು ಆರೋಪಿಸಿದ್ದಾರೆ.

ಶರಣ್ಯಾ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಕೆ ಪೋಷಕರು ಒತ್ತಾಯಿಸಿದ್ದಾರೆ.

Related Articles

Back to top button