Latest

ಅಳು ನಿಲ್ಲಿಸುತ್ತಿಲ್ಲ ಎಂದು ಇಬ್ಬರು ಪುಟ್ಟ ಮಕ್ಕಳನ್ನೇ ಹತ್ಯೆಗೈದು ಸುಟ್ಟುಹಾಕಿದ ತಾಯಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತಿದೆ. ಆದರೆ ಈ ಮಾತಿಗೆ ಅಪವಾದ ಎಂಬಂತಹ ಘಟನೆ ಬೆಳಕಿಗೆ ಬಂದಿದೆ.

ಅಳು ನಿಲ್ಲಿಸದ ಇಬ್ಬರು ಮಕ್ಕಳನ್ನು ಹೆತ್ತ ತಾಯಿಯೇ ಕೊಂದು ಸುಟ್ಟು ಹಾಕಿರುವ ಅಮಾನುಷ ಘಟನೆ ಮಹಾರಾಷ್ಟ್ರದ ನಾಂದೆಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

30 ವರ್ಷದ ದುರ್ಪಾದಬಾಯಿ ಗಣಪತ್ ನಿಮಲ್ವಾಡ್ ಎಂಬ ಮಹಿಳೆ ನಾಲ್ಕು ತಿಂಗಳ ಕಂದ ಹಾಗೂ 2 ವರ್ಷದ ಮಗನನ್ನು ಹತ್ಯೆಗೈದು, ಮಕ್ಕಳ ಮೃತದೇಹವನ್ನು ಸುಟ್ಟುಹಾಕಿದ್ದಾಳೆ.

ಮಕ್ಕಳ ಶವವನ್ನು ಸುಡಲು ಮಹಿಳೆಯ ತಾಯಿ ಹಾಗೂ ಸಹೋದರ ಇಬ್ಬರೂ ಸಹಾಯ ಮಾಡಿದ್ದಾರೆ. ಮೇ 31ರಂದು ದುರ್ಪಾದಬಾಯಿ ತನ್ನ ನಾಲ್ಕು ತಿಂಗಳ ಮಗು ಅನುಸೂಯಾ ತುಂಬಾ ಅಳುತ್ತಿದ್ದಳು ಎಂಬ ಕಾರಣಕ್ಕೆ ಕೋಪಗೊಂಡು ಆಕೆಯ ಕತ್ತು ಹಿಸುಕಿ ಕೊಂದಿದ್ದಾಳೆ. ಮಾರನೇಯ ದಿನ ಮಗ ಅಳುತ್ತಿದ್ದಾನೆ ಎಂಬ ಕಾರಣಕ್ಕೆ ಆತನ ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ಇಬ್ಬರ ಮಕ್ಕಳ ಮೃತದೇಹವನ್ನು ಮೂವರು ಸೇರಿ ಹೊಲದಲ್ಲಿ ಸುಟ್ಟುಹಾಕಿದ್ದಾರೆ.

Home add -Advt

ಘಟನೆ ಬಗ್ಗೆ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಂಧ್ರದಲ್ಲಿ ವಿಷಾನಿಲ ಸೋರಿಕೆ; 30ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ

Related Articles

Back to top button