CrimeKarnataka NewsLatest

*ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಛಿದ್ರ ಛಿದ್ರವಾದ ಮಹಿಳೆಯ ದೇಹ*

ಪ್ರಗತಿವಾಹಿನಿ ಸುದ್ದಿ: ಆಕಸ್ಮಿಕ ಘಟನೆಯೊಂದು ಮಹಿಳೆಯ ಜೀವವನ್ನೇ ಬಲಿ ಪಡೆದಿದೆ. ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಘಟಕದಲ್ಲಿ ಈ ದುರಂತ ನಡೆದಿದೆ. ಕಾಡತಿಪ್ಪೂರು ಮೂಲದ ಅರಸಮ್ಮ(45) ಮೃತ ದುರ್ದೈವಿ. ಕಸ ವಿಂಗಡಣೆ ಯಂತ್ರದ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳೆ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಯಂತ್ರಕ್ಕೆ ಮಹಿಳೆ ಸಿಲುಕಿದ ಪರಿಣಾಮ, ಕೈ ಕಾಲು ತುಂಡಾಗಿ ಬಿದ್ದಿದ್ದು, ದೇಹ ಛಿದ್ರ ಛಿದ್ರವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಹಿಳೆ ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಂಗಳೂರು ನಗರದ ಕಸವನ್ನ ತಂದು ಈ ಘಟಕದಲ್ಲಿ ವಿಂಗಡಣೆ ಮಾಡಲಾಗುತ್ತಿತ್ತು. ಇಂದು ಬೆಳಗ್ಗೆ ಕಸ ವಿಂಗಡಣೆ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button