ಪ್ರಗತಿವಾಹಿನಿ ಸುದ್ದಿ; ಜೈಪುರ: ಬೆಳ್ಳಿ ಗೆಜ್ಜೆ ಆಸೆಗಾಗಿ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯನ್ನೇ ಹತ್ಯೆಗೈದು ಮನೆಯಲ್ಲಿಯೇ ಹೂತಿಟ್ಟ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ನಡೆದಿದೆ.
29 ವರ್ಷದ ಮಹಿಳೆಯೊಬ್ಬಳು ಪಕ್ಕದ ಮನೆಯ 4 ವರ್ಷದ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ಬಳಿಕ ಬಾಲಕಿ ತಲೆಗೆ ಕಲ್ಲಿನಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಮನೆಯ ಬಳಿ ಮರಳು ರಾಶಿ ಕೆಳಗೆ ಬಾಲಕಿ ಮೃತದೇಹವನ್ನು ಹೂತಿಟ್ಟಿದ್ದಾಳೆ.
ಮಗಳು ಕಾಣೆಯಾಗಿದ್ದಾಳೆ ಎಂದು ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರಿಗೆ ಅಂದು ಸಂಜೆ ಬಾಲಕಿ ಪಕ್ಕದ ಮನೆಯ ಮಹಿಳೆಯೊಂದಿಗೆ ಹೋಗಿದ್ದಾಗಿ ಗೊತ್ತಾಗಿದೆ. ಮಹಿಳೆಯನ್ನು ವಿಚಾರಣೆ ನಡೆಸಿದಾಗ ಮಹಿಳೆ ಬಾಲಕಿಯ ಕಾಲ್ಗೆಜ್ಜೆ ಕಂಡು ಆಸೆಯಾಗಿದ್ದು ಅದೇ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.
ಬಾಲಕಿ ಕೊಲೆ ಬಳಿಕ ಆಕೆಯ ಕಾಲಿನಲ್ಲಿದ್ದ ಗೆಜ್ಜೆ ತೆಗೆದುಕೊಂಡು ಬಳಿಕ ಶವವನ್ನು ಮರಳಿನ ದಿಬ್ಬದಲ್ಲಿ ಹೂತಿಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಭವಾನಿಮಂಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಸಿಂಗ್ ತಿಳಿಸಿದ್ದಾರೆ.
ಭಾರಿ ಚರ್ಚೆಗೆ ಕಾರಣವಾಯ್ತು ಸಚಿವ ಅಶ್ವತ್ಥನಾರಾಯಣ-ಎಂ.ಬಿ.ಪಾಟೀಲ್ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ