
ಪ್ರಗತಿವಾಹಿನಿ ಸುದ್ದಿ: ದರೋಡೆಗೆ ಬಂದಿದ್ದ ಇಬ್ಬರು ದರೋಡೆಕೊರರು ಮಹಿಳೆಯನ್ನು ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಬಳಿಕ ಕತ್ತರಿಯಿಂದ ಆಕೆಯ ಗಂಟಲು ಸೀಳಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಸ್ಕ್ಯಾನ್ ಲೇಕ್ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ. 13ನೇ ಮಹಡಿಯಲ್ಲಿ ವಾಸಿಸುತ್ತಿದ್ದ ರೇಣು ಅಗರ್ವಾಲ್ (50) ಹತ್ಯೆಯಾದ ಮಹಿಳೆ.
ದರೋಡೆಕೊರರು ಕೊಲೆಯಾದ ಬಳಿಕ ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಕೊಲೆ ಮಾಡಿ ಆಕೆಯ ಮನೆಯಲ್ಲೇ ಸ್ನಾನ ಮಾಡಿದ ದುಷ್ಕರ್ಮಿಗಳು ರಕ್ತಸಿಕ್ತ ಬಟ್ಟೆಗಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರೇಣು ಅಗರ್ವಾಲ್ ಪತಿ, ಮಗ ಮನೆಯಿಂದ ತೆರಳಿದ್ದರು. ಸಂಜೆ 5 ಗಂಟೆಗೆ ಪತಿ, ಪತ್ನಿ ರೇಣುಗೆ ಕಾಲ್ ಮಾಡಿದ್ದರು. ಕರೆ ಸ್ವೀಕರಿಸದಿದ್ದಾಗ ಪತಿ ಮನೆಗೆ ಬಂದಿದ್ದಾರೆ. ಪ್ಲಂಬರ್ ಸಹಾಯದಿಂದ ಬಾಲ್ಕನಿ ಮೂಲಕ ಮನೆಗೆ ಎಂಟ್ರಿ ಕೊಟ್ಟು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.