ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಸ್ತಿ ಆಸೆಗಾಗಿ ತಂಗಿಯೇ ತನ್ನ ಅಕ್ಕ ಹಾಗೂ ಆಕೆಯ ಮಗುವನ್ನು ಹತ್ಯೆಗೈದ ಘೋರ ಘಟನೆ ತಮಿಳುನಾಡಿನ ಕಲ್ಲಕ್ಕೂರಿಚಿ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಸುಜಾತಾ ಎಂದು ಗುರುತಿಸಲಾಗಿದೆ. ಸುಮತಿ ಹಾಗೂ ಆಕೆಯ ಮಗಳು ಶ್ರೀನಿಧಿ ಕೊಲೆಯಾದ ದುರ್ದೈವಿಗಳು.
ಸುಜಾತಾ ತನ್ನ ತವರು ಮನೆಯ 20 ಗುಂಟೆ ಜಾಗಕ್ಕಾಗಿ ಸ್ವಂತ ಅಕ್ಕ ಹಾಗೂ ಆಕೆಯ ಮಗಳನ್ನು ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬಯಲಾಗಿದ್ದು, ಇದೀಗ ಆರೋಪಿ ಸುಜಾತ ಪೊಲೀಸರ ಅತಿಥಿಯಾಗಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ