
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಕಂಗ್ರಾಳಿ ಬಿ.ಕೆ. ಅಂಬೇಡ್ಕರ ಗಲ್ಲಿಯ ಮಹಿಳೆ ನಾಪತ್ತೆಯಾಗಿದ್ದಾಳೆ.
ಶಂಕುತಲಾ ಕಲ್ಲಪ್ಪಾ ಮೈಲೆನ್ನವರ ಎಂಬುವವರು ತಮ್ಮ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಶಂಕುತಲಾ ಕಲ್ಲಪ್ಪಾ ಮೈಲೆನ್ನವರ, ವಯಸ್ಸು ೩೩ವರ್ಷ, ೫ ಪೂಟ್ ೨ಇಂಚು ಎತ್ತರವಿದ್ದು, ಗೋದಿ ಮೈ ಬಣ್ಣ, ದುಂಡು ಮುಖ, ಉದ್ದ ಮೂಗು, ಕನ್ನಡ ಹಿಂದಿ ಮರಾಠಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಕಾಕತಿ ಪೋಲಿಸ್ ಠಾಣೆಗೆ ಸಂಪರ್ಕಿಸಬೇಕೆಂದು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ