Kannada NewsKarnataka NewsNationalPolitics

*ಸಾಲ ತೀರಿಸುವ ಪಂಚಾಯತ್ ಅನ್ನೇ ಲೀಸ್ ಗೆ ಇಡಲು ಮುಂದಾದ ಮಹಿಳಾ ಸರಪಂಚರು*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಸರಪಂಚ್ ಒಬ್ಬರು ಸಾಲ ತೀರಿಸುವ ಪಂಚಾಯತ್ ಅನ್ನೇ ಲೀಸ್ ಗೆ ಇಡಲು ಮುಂದಾದ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯ ಕರೋಡ್ ಪಂಚಾಯತ್ ನಲ್ಲಿ ನಡೆದಿದೆ.

ಸುಮಾರು 20 ಲಕ್ಷ  ರೂಪಾಯಿ ಸಾಲ ಮರುಪಾವತಿಸಲು ಈ ಮಹಿಳಾ ಸರಪಂಚರು ಪಂಚಾಯತ್ ಅನ್ನು ಲೀಜ್‌ಗೆ ನೀಡಿರುವ ಕುರಿತು ಈಕೆ ಅಧಿಕೃತವಾಗಿ ಅಫಿಡವಿಟ್ ಒಂದನ್ನು ಸಿದ್ಧಪಡಿಸಿ ಪಂಚಾಯತ್‌ಗೆ ಸಲ್ಲಿಕೆ ಮಾಡಿದ್ದಳು.

ಈ ಕಾರಣಕ್ಕೆ ಸದ್ಯ ಸರಪಂಚ್ ಲಕ್ಷ್ಮಿಬಾಯಿ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ. ಸಾಮಾನ್ಯವಾಗಿ ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳಿಗೆ ಬರುವ ಅನುದಾನದ ಹಣದ ಮೇಲೆ ಸರಪಂಚ್ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button