Kannada NewsKarnataka NewsLatest

ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಮಹಿಳಾ ದಿನಾಚರಣೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಬರುವ ಸೋಮವಾರ ೮ ಮಾರ್ಚ್ ೨೦೨೧ ರಂದು ಜೆಎನ್‌ಎಂಸಿ ಸೆಂಟನರಿ ಕನ್ವೇಷನ್‌ನ ಬಿ.ಎಸ್.ಜೀರಗೆ ಸಭಾಗೃಹದಲ್ಲಿ ಮುಂಜಾನೆ ೧೧ ಗಂಟೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ   ವಿಶೇಷ ಸಮಾರಂಭವನ್ನು ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹಾಗೂ ಗೌರವ ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸ್ವಶಕ್ತಿ ಸಬಲೀಕರಣ ಘಟಕ ಅಧ್ಯಕ್ಷತೆಯನ್ನು   ಆಶಾ ಪ್ರಭಾಕರ ಕೋರೆಯವರು ವಹಿಸಲಿದ್ದಾರೆ.
ತನ್ನಿಮಿತ್ತ ಲಿಂಗರಾಜ ಕಾಲೇಜಿನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷೆ  ಆಶಾ ಪ್ರಭಾಕರ ಕೋರೆ ಈ ಕುರಿತು ಮಾಹಿತಿ ನೀಡಿದರು.

ಉಪಾಧ್ಯಕ್ಷರಾದ ಡಾ.ಸುಜಾತಾ ಜಾಲಿ, ಡಾ.ಅಲ್ಕಾ ಕಾಳೆ, ಡಾ.ಪ್ರೀತಿ ದೊಡವಾಡ, ಡಾ.ನೇಹಾ ದಢೇದ ಮಾತನಾಡಿದರು. ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಜ್ಯೋತಿ ಕವಳೇಕರ ಸ್ವಾಗತಿಸಿದರು.

ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಮಾಹಿತಿ

ಮಾರ್ಚ್ ೮, ೨೦೦೭ ರಂದು ಪ್ರಾರಂಭವಾದ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ಸಮಾಜದ ವಿವಿಧ ಸ್ತರಗಳಲ್ಲಿ ಮಹಿಳೆಯರ ಸರ್ವೋನ್ನತಿಗಾಗಿ ಹಲವಾರು ನೆಲೆಗಳಲ್ಲಿ ಶ್ರಮಿಸುತ್ತಿದೆ.
ಹಿಂದುಳಿದ ಹಾಗೂ ವಂಚಿತ ಮಹಿಳೆಯರು ಮೊದಲ್ಗೊಂಡು ಬೆಳಗಾವಿಯ ಕೇಂದ್ರ ಕಾರಾಗೃಹದ ಕೈದಿಗಳು ಮತ್ತು ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸ್ವಶಕ್ತಿಘಟಕವು ಆಯೋಜಿಸಿತ್ತು. ಅವರ ಆರೋಗ್ಯ ಕುರಿತು ಸಮಗ್ರವಾದ ವಿವರವನ್ನು ಪಡೆಯುವುದರೊಂದಿಗೆ ಆಪ್ತ ಸಮಾಲೋಚನೆಯನ್ನು ಹಾಗೂ ಅಗತ್ಯ ಆರೋಗ್ಯ ಚಿಕಿತ್ಸೆಯನ್ನು ನೀಡಿದೆ. ಸುಮಾರು ೪,೦೦೦ ಮಹಿಳೆಯರು ಇದರ ಪ್ರಯೋಜವನ್ನು ಪಡೆದುಕೊಂಡಿದ್ದಾರೆ. ಅವರಿಗೆ ನುರಿತ ವೈದ್ಯಕೀಯ ಮತ್ತು ದಂತತಜ್ಞರು ಚಿಕಿತ್ಸೆ ನೀಡಿದ್ದಾರೆ. ಮಾತ್ರವಲ್ಲದೆ ಉಚಿತ ಔಷಧಿಗಳ ವಿತರಣೆಯನ್ನು ಮಾಡಲಾಗಿದೆ.
ಅಂತೆಯೆ ಮಹಿಳಾ ಘಟಕವು ಸ್ತನ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರವನ್ನು ನಡೆಸಲಾಯಿತು. ೨೦೦೦ ಮಹಿಳೆಯರನ್ನು ಚಿಕಿತ್ಸೆಗೆ ಒಳಪಡಿಸಲಾಯಿತು. ಅವರಲ್ಲಿ ಸುಮಾರು ೨೧ ಮಹಿಳೆಯರು ಶಿಬಿರದಲ್ಲಿ ಸಂಪೂರ್ಣ ಚಿಕಿತ್ಸೆಯ ಪ್ರಯೋಜನ ಪಡೆದರು. ಇದರೊಂದಿಗೆ ಈ ಸ್ತನ ಕ್ಯಾನ್ಸರ್ ಸ್ಕ್ರಿನಿಂಗ್ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ೨೦೨೦-೨೦೨೧ರ ಅವಧಿಯಲ್ಲಿ ಸ್ತನ ಕ್ಯಾನ್ಸರ್ ಹರಡುವಿಕೆಯನ್ನು ಅಧ್ಯಯನ ಮಾಡಲು ಸಂಶೋಧನಾ ಯೋಜನೆಗಳನ್ನು ರೂಪಿಸಲಾಗಿದೆ.
ಸ್ವಶಕ್ತಿಘಟಕವು ಮಾನ್ಯ ಪ್ರಧಾನ ಮಂತ್ರಿಯವರ ಸ್ವಚ್ಚ ಭಾರತ್ ಕರೆಯನ್ನು ಮನೆ, ಸಾಂಸ್ಥಿಕ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕಾಲಕಾಲಕ್ಕೆ ವಿಸ್ತರಿಸಿದೆ. ತ್ಯಾಜ್ಯ ಬೇರ್ಪಡಿಸುವಿಕೆ ಮತ್ತು ತ್ಯಾಜ್ಯ ನಿರ್ವಹಣೆಗೆ ಸರಳವಾದ ಸಂಯೋಜನೆ ಮಾಡುವುದು, ವರ್ಮಿ ಮಿಶ್ರಗೊಬ್ಬರದ ಮೂಲಕ ಜೀವಂತಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಘಟಕವು ಕಾಲಕಾಲಕ್ಕೆ ಕೈಗೊಂಡಿದೆ. ಈ ಪ್ರಯತ್ನ ಕಿರಿದೆನಿಸಿದರೂ ಅದರ ಫಲಶೃತಿಯೆಂಬಂತೆ ಕೆಎಲ್‌ಇ ವಿಶ್ವವಿದ್ಯಾಲಯವು ಸ್ವಚ್ಛತಾ ಅಭಿಯಾನದಲ್ಲಿ ಅತ್ಯುನ್ನತ ಶ್ರೇಯಾಂಕವನ್ನು ಪಡೆಯುಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಘಟಕದ ಕಾರ್ಯ ಗಮನಾರ್ಹವೆನಿಸಿದೆ.
ಕೆಲಸದ ಸ್ಥಳದಲ್ಲಿ ಲಿಂಗ ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕೆಎಲ್‌ಇ ಸ್ವಶಕ್ತಿ ಸಬಲೀಕರಣ ಘಟಕವು ಮಹಿಳೆಯರ ಸ್ಥಾನಮಾನಗಳನ್ನು ಎತ್ತಿಹಿಡಿದೆ. ಮಹಿಳೆಯರ ಸಮಸ್ಯೆಗಳ ಕುರಿತು ಜಾಗೃತಿ ಅಭಿಯಾನಗಳು ಕೈಗೊಂಡಿದೆ. ಘಟಕದ ಮುಂದೆ ಮುಂದೆ ತರಲಾಗುವ ಕುಂದುಕೊರತೆಗಳನ್ನು ಪರಿಶೀಲಿಸಿ ಆ ಮೂಲಕ ಋಣಾತ್ಮಕವಾದ ಫಲಗಳನ್ನು ನೀಡಿದೆ. ಮಹಿಳೆಯರ ಅನೇಕ ಸಮಸ್ಯೆಗಳು ಪರಿಹಾರಗೊಂಡಿರುವುದೇ ಇದಕ್ಕೆ ಸಾಕ್ಷಿ.
ಹದಿಹರೆಯದವರಿಗೆ ಶಿಕ್ಷಣದ ಮೂಲಕ ಅವರಿಗೆ ಅರಿವು ಮೂಡಿಸುವ ಮಹತ್ವದ ಕಾರ್ಯಕ್ರಮಗಳನ್ನು ಘಟಕ ವರ್ಷಪೂರ್ತಿ ಜರುಗಿಸಿಕೊಟ್ಟಿದೆ. ಇಂದಿನ ಹದಿಹರೆಯದವರ ಜೀವನವನ್ನು ಹಾಳು ಮಾಡುವ ವಿವಿಧ ಸಾಮಾಜಿಕ ಜಾಲತಾಣಗಳು ಬೆಳೆದುನಿಂತಿವೆ. ಅವುಗಳ ಕುರಿತು ಸ್ಪಷ್ಟವಾದ ಅರಿವು ಮೂಡಿಸುವ ಕುರಿತಾಗಿ ಹದಿಹರೆಯದ ಮತ್ತು ಪ್ರೌಢಾವಸ್ಥೆಯಲ್ಲಿರುವ ಹುಡುಗ ಹಾಗೂ ಹುಡುಗಿಯರಿಗೆ ಪ್ರಸ್ತುತಿಗಳು, ವೀಡಿಯೊಗಳು ಮತ್ತು ಮುದ್ರಿತ ಸಾಮಗ್ರಿಗಳ ಸಹಾಯದಿಂದ ವಿವಿಧ ರೀತಿಯ ಕಾರ್ಯಾಗಾರಗಳು ಆಯೋಜಿಸಿದೆ. ಮಹಿಳಾ ಸ್ತ್ರೀರೋಗ ತಜ್ಞರು ಬಾಲಕಿಯರಿಗೆ ಸಂಪನ್ಮೂಲವ್ಯಕ್ತಿಗಳಾಗಿ ಮತ್ತು ಹುಡುಗರಿಗೆ ಪುರುಷ ತಜ್ಞವೈದ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಸಂವಾದಾತ್ಮಕ ಅಧಿವೇಶನಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರೌಢಾವಸ್ಥೆಯ ಹದಿಹರಿಯದ ಸಮಸ್ಯೆಗಳು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ೨೫೦೦ ಹದಿಹರೆಯದವರು ಇದರ ಪ್ರಯೋಜವನ್ನು ಪಡೆದುಕೊಂಡಿದ್ದಾರೆ.
ಮಹಿಳಾ ಸ್ವಶಕ್ತಿಘಟಕವು “ವೀ ಕೇರ್”ನ ಎರಡು ಪ್ರಮುಖ ಶಾಖೆಗಳನ್ನು ಸ್ಥಾಪಿಸಿದೆ ಮತ್ತು ಸುಮಾರು ೬ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ೧೦೦ ಕ್ಕೂ ಹೆಚ್ಚು ದುಡಿಯುವ ಮಹಿಳೆಯರ ಮಕ್ಕಳ ಆರೈಕೆಯನ್ನು ಮಾಡುತ್ತಿದೆ.
ಹಣಕಾಸು ಮತ್ತು ಹೂಡಿಕೆ ಯೋಜನೆ, ಮೈಕ್ರೋಸಾಫ್ಟ್ ವರ್ಡ್, ದಸ್ತಾವೇಜನ್ನು ಕುರಿತು ವಿಶೇಷ ಕಂಪ್ಯೂಟರ್ ತರಬೇತಿ ನೀಡುತ್ತಿದೆ. ಎಕ್ಸೆಲ್, ಪವರ್ ಪಾಯಿಂಟ್, ಇಮೇಲ್ ಬರವಣ ಗೆ, ಡಾಕ್ಯುಮೆಂಟ್ ನಿರ್ವಹಣೆ ಮತ್ತುಡಾಕ್ಯುಮೆಂಟ್ ಫಾರ್ಮ್ಯಾಟ್ ಪರಿವರ್ತನೆಯಂತಹ ವಿವಿಧ ರೀತಿಯ ಕಂಪ್ಯೂಟರ್ ತರಬೇತಿಗಳು ಇಲ್ಲಿ ಒಳಗೊಂಡಿವೆ. ಸುಮಾರು ೨೦೦೦ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಎಪಿಪಿ ಗೇಮ್ ಆಫ್ ಗಿವಿಂಗ್ವನ್ನು ಪ್ರಾರಂಭಿಸುವ ಮೂಲಕ ಡಿಜಿಟಲೀಕರಣದತ್ತ ಪರಿವರ್ತನೆಯಾಗಿದೆ, ಇದು ದಾನಿಗಳು ಮತ್ತು ವಿವಿಧ ಎನ್‌ಜಿಓಗಳ ನಡುವೆ ವೇದಿಕೆಯನ್ನು ನಿರ್ಮಿಸಲು ಪ್ರಯತ್ನಿಸಿದೆ.
ಶೌಚಾಲಯದ ಮೂಲ ಸೌಲಭ್ಯವಿಲ್ಲದ ಸರ್ಕಾರಿ ಶಾಲೆಗಳಲ್ಲಿ ಸ್ತ್ರೀ ಶೌಚಾಲಯಗಳನ್ನು ನಿರ್ಮಿಸಲು ಮಹಿಳಾ ಘಟಕವು ಮುಂದಾಗಿದೆ. ಇತ್ತೀಚೆಗೆ ಬೆಳಗಾವಿಯ ನಾನಾವಾಡಿಯ ಸರಕಾರಿ ಮರಾಠಿ ಪ್ರಾಥಮಿಕ ಶಾಲೆ ಸಂಖ್ಯೆ ೩೭ರಲ್ಲಿ ಎರಡು ಶೌಚಾಲಯಗಳ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ, ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಹೋಂ ಕೇರ್ ಉಪಕರಣಗಳ ಬೇಡಿಕೆ ಹೆಚ್ಚಿತ್ತು. ಮರುಪಾವತಿಸಬಹುದಾದ ಠೇವಣ ಯಲ್ಲಿ ಕಡಿಮೆ ಹಣದಲ್ಲಿ ಮಹಿಳಾ ರೋಗಿಗಳಿಗೆ ಹಾಸಿಗೆ, ಏರ್ ಬೆಡ್, ಸಲೈನ್ ಸ್ಟ್ಯಾಂಡ್, ವಾಕರ್, ಗಾಲಿಕುರ್ಚಿ ಹೀಗೆ ಹಲವಾರು ಉಪಕರಣಗಳನ್ನು ನೀಡಿ ಅನುಕೂಲ ಕಲ್ಪಿಸಿದೆ. ಇಲ್ಲಿಯವರೆಗೆ ೨೫ ರೋಗಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ.
ಮೇಕ್‌ಇನ್ ಬೆಲ್ಗೌಮ್ವನ್ನು ಉತ್ತೇಜಿಸಲು ವೋಕಲ್ ಫಾರ್ ಲೋಕಲ್ನ ರಾಷ್ಟ್ರೀಯ ಕರೆಗೆ ಸ್ಥಳೀಯರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮಾರಾಟ ವೇದಿಕೆಯನ್ನು ಒದಗಿಸಿದೆ. ಬೆಳಗಾವಿ ನಗರದ ವಿಶೇಷ ನಾಗರಿಕರಿಗೆ ಭೌತಿಕವಾಗಿ ಸವಾಲಾಗಿರುವ ವಿಶ್ವಾಸ್ ಫೌಂಡೇಶನ್ ನಂತಹ ವೇದಿಕೆಯನ್ನು ಒದಗಿಸಿರುವ ಮಹಿಳಾ ಘಟಕವು ಅವರ ದಾಸ್ತಾನುಗಳನ್ನು ಮಾರಲು ಮತ್ತು ಆರ್ಥಿಕ ಸ್ಥಿರತೆಯನ್ನು ಪಡೆಯಲು ಸಹಾಯ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button