ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಂತರಾಷ್ಟ್ರೀಯ ಏಕದಿನ ಮಹಿಳಾ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತೀಯ ವನಿತೆಯರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೌಂಟ್ ಮೌಂಗನುಯಿ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡು, 107 ರನ್ಗಳ ಅಮೋಘ ಗೆಲುವು ಸಾಧಿಸುವ ಮೂಲಕ ಭಾರತೀಯ ವನಿತೆಯರು ಪಾಕ್ ವಿರುದ್ಧ ಗೆದ್ದು ಬೀಗಿದ್ದಾರೆ.
ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿಯೇ ಭಾರತದ ಮಿಥಾಲಿ ರಾಜ್ ಪಡೆ ಭರ್ಜರಿ ಶುಭಾರಂಭ ಮಾಡಿದೆ. ಭಾರತ ನೀಡಿದ್ದ 245 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲಿಯೇ ಆಘಾತಕ್ಕೊಳಗಾಗಿದೆ. ಕೇವಲ 43 ಓವರ್ ಆಡಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಸೋಲನುಭವಿಸಿದೆ. ಭಾರತದ ಭಾರತ 107 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಕನ್ನಡದಿ ರಾಜೇಶ್ವರಿ ಗಾಯಕ್ವಾಡ್ ಮಾರಕ ಬೌಲಿಂಗ್ ದಾಳಿಗೆ ಪಾಕ್ ನೆಲಕಚ್ಚಿದೆ. ಭಾರತ ಪರ ರಾಜೇಶ್ವರಿ 4 ವಿಕೆಟ್, ಜೂಲನ್, ಸ್ನೇಹ್ ತಲಾ 2 ವಿಕೆಟ್, ಮೇಘನಾ ಸಿಂಗ್, ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ಸಿದ್ರಾ ಅಮಿನ್ 30 ರನ್ ಗಳಿಸಿದ್ದು ಬಿಟ್ಟರೆ ಜವೇರಿಯಾ, ಬಿಸ್ಮಾ, ಒಮೈಮಾ, ಆಲಿಯಾ ರಿಯಾಜ್ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ಸೋಲಿಗೆ ಶರಣಾದರು.
ಉಕ್ರೇನ್-ರಷ್ಯಾ ಮುಂದುವರೆದ ಯುದ್ಧ; ಯಾವ ಸೇನೆಗೆ ಎಷ್ಟು ನಷ್ಟ? ಸಂಪೂರ್ಣ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ