Cancer Hospital 2
Beereshwara 36
LaxmiTai 5

*ಕ್ರಿಮಿನಲ್ ಲಾ ಕುರಿತು ಬೆಳಗಾವಿ ಪೊಲೀಸರಿಗೆ ಕಾರ್ಯಗಾರ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ಘಟಕದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ “ನ್ಯೂವ್ ಕ್ರೀಮಿನಲ್ ಲಾ” ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.‌

Emergency Service

ಬೆಳಗಾವಿ ನಗರ ಪೋಲಿಸ್ ಆಯುಕ್ತರ ಹಾಗೂ ಡಿಸಿಪಿಗಳ ನೇತೃತ್ವದಲ್ಲಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.‌ ಮೇ 18 ಹಾಗೂ 23 ರಂದು ಮೈಸೂರು ಕೆಪಿಎ ಹಾಗೂ ಬೆಳಗಾವಿ ನಗರದ ಆರ್. ಎಲ್ ಲಾ ಕಾಲೇಜ್ ಸಹಕಾರದೊಂದಿಗೆ, ಮೈಸೂರಿನ ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸುರೇಶ್ ಹಾಗೂ ನ್ಯಾಯವಾದಿಗಳಾದ ಸಾವಂತ್ ರವರಿಂದ ಆನ್ಲೈನ್ ಹಾಗೂ ಆಫ್ಲೈನ್ ಕ್ಲಾಸ್ ಗಳ ಮೂಲಕ ಉಪನ್ಯಾಸ ನೀಡಲಾಗಿದೆ.‌

ಇಲ್ಲಿವರೆಗೆ ಬೆಳಗಾವಿ ನಗರದ ಸುಮಾರು 800 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿರುತ್ತದೆ. ಈ ಕಾರ್ಯಗಾರಗಳನ್ನು ಇನ್ನೂ ಮುಂದುವರಿಸಿ ನಗರದ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ತರಬೇತಿ ನೀಡಲಾಗುವುದು ಎಂದು ಬೆಳಗಾವಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.‌

Bottom Add3
Bottom Ad 2