Kannada NewsKarnataka News

ಸಫಾಯಿ ಕರ್ಮಚಾರಿ ಸಿಬ್ಬಂದಿಗೆ ಕಾರ್ಯಾಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ  ವಿಶ್ವವಿದ್ಯಾಲಯದ ಸಫಾಯಿ ಕರ್ಮಚಾರಿ ಸಿಬ್ಬಂದಿಗೆ ಸರ್ಕಾರಿ ಯೋಜನೆಗಳು ಹಾಗೂ ಸ್ವಚ್ಛತೆ ಕುರಿತು ಮಾಹಿತಿ ಕಾರ್ಯಾಗಾರವನ್ನು ವಿಶ್ವವಿದ್ಯಾಲಯದ ಸೆನೇಟ್ ಹಾಲ್‍ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಕುಲಸಚಿವ ಡಾ. ಎ.ಎಸ್.ದೇಶಪಾಂಡೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಬಸವರಾಜ ಕುರಿಹೊಳಿ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಪ್ರವೀಣಕುಮಾರ್, ಪರಿಸರ ಅಭಿಯಂತರರು, ಮಹಾನಗರ ಪಾಲಿಕೆ,  ಬಸವರಾಜ್ ಚೆನ್ನನವರ, ಜಿಲ್ಲಾ ವ್ಯವಸ್ಥಾಪಕರು, ಡಾ.ಅಂಬೇಡ್ಕರ ಅಭಿವೃದ್ಧಿ ನಿಗಮ, ಡಾ. ಸತೀಶ ಅಣ್ಣೀಗೇರಿ, ಕುಲಸಚಿವರು (ಮೌಲ್ಯಮಾಪನ), ಎಮ್.ಎ.ಸಪ್ನ, ಹಣಕಾಸು ಅಧಿಕಾರಿಗಳು, ವಿ.ತಾ.ವಿ., ಡಾ. ಮಹೇಶ ಸತ್ತೀಗೇರಿ, ವೈದ್ಯಾಧಿಕಾರಿಗಳು, ವಿ.ತಾ.ವಿ. ಹಾಗೂ ಡಾ. ಪ್ರಲ್ಹಾದ ರಾಠೋಡ್, ಲೈಜನ್ ಆಫೀಸರ್, ಅ.ಜಾತಿ/ಅ.ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಘಟಕ, ವಿ.ತಾ.ವಿ. ಇವರು ಭಾಗವಹಿಸಿದ್ದರು.

ಕಾರ್ಯಾಗಾರವು ಪ್ರಾರ್ಥನೆ ಹಾಗೂ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು.  ಡಾ. ಎ.ಎಸ್.ದೇಶಪಾಂಡೆ ಸ್ವಾಗತಿಸಿದರು ಮತ್ತು ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿಯೂ ಹಾಗೂ ಸ್ವಚ್ಚತೆ ಮತ್ತು ಆರೋಗ್ಯದ ಮುಂಜಾಗ್ರತೆಯ ಬಗ್ಗೆ ಜಾಗೃತವಾಗಿರಬೇಕೆಂದು ಸಲಹೆ ನೀಡಿದರು.

ಬಸವರಾಜ ಕುರಿಹೊಳಿ  ಪ್ರಾಸ್ತಾವಿಕ ಭಾಷಣದಲ್ಲಿ ಸಫಾಯಿ ಕರ್ಮಚಾರಿಗಳು ಕಾರ್ಯನಿರ್ವಹಿಸುವ ಪದ್ದತಿ ಹಾಗೂ ಮುಂಜಾಗ್ರತೆ ಬಗ್ಗೆ ಕ್ರಮವಹಿಸುವುದರ ಕುರಿತು ವಿವರಣೆ ನೀಡಿದರು. ಡಾ. ಸತ್ತೀಗೇರಿ ಕಾರ್ಮಿಕರಿಗೆ ಆರೋಗ್ಯ, ಸ್ವಚ್ಚತೆ ಹಾಗೂ ಆಹಾರ ಪದ್ದತಿ, ವ್ಯಾಯಾಮ, ದೈಹಿಕ ಮತ್ತು ಮಾನಸಿಕ ಸಮತೋಲನ ನಿರ್ವಹಣೆ ಕುರಿತು ವಿವರಿಸಿದರು.  ಅಮೃತಾ ನಿರೂಪಿಸಿದರು. ಡಾ. ಪ್ರಲ್ಹಾದ ರಾಠೋಡ್  ವಂದನಾರ್ಪಣೆಯನ್ನು ಸಲ್ಲಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button