*ವಿವಿಧ ಸಂಘ ಸಂಸ್ಥೆಗಳಿಂದ ವಿಶ್ವ ಪರಿಸರ ದಿನಾಚರಣೆ ಆಚರಣೆ*
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟ ಕರ್ನಾಟಕ, ರೋಟರಿ ಕ್ಲಬ್ ಸೌತ್ ಬೆಳಗಾವಿ, ಚೇಂಬರ್ ಆಫ್ ಕಾಮರ್ಸ್ ಬೆಳಗಾವಿ, ಎಪಿಎಂಸಿ, ಜೈ ಕಿಸಾನ್ ತರಕಾರಿ ಮಾರುಕಟ್ಟೆ ಬೆಳಗಾವಿ ಹಾಗೂ ಅರಣ್ಯ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ವರ್ತಕರ ಸಂಘದ ಪ್ರಮುಖ ಮಲ್ಲಿಕಾರ್ಜುನ್ ತೆಲಸಂಗ ಮತ್ತು ರಾಜ್ಯ ಬಿಜೆಪಿಯ ಪ್ರಕೋಷ್ಟಗಳ ರಾಜ್ಯ ಸಂಯೋಜಕರಾದ ದತ್ತಾತ್ರಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಸಿ.ಸಿ. ಹೊಂಡದಕಟ್ಟಿರವರು ಮತ್ತು ರೋಟರಿ ಕ್ಲಬ್ ಅಧ್ಯಕ್ಷರಾದ ದರಗ್ ಶೆಟ್ಟ, ಅಜಯ್ ಬಾಟ್ಯ, ಉದಯ್ ಜೋಶಿ, ಗೋವಿಂದ್ ಮಿಸ್ಸಾಳೆ, ನೀಲೇಶ್ ಪಾಟೀಲ ಹಾಗೂ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಸ್ಟದ ಸಂಚಾಲಕರು ವಿಜಯಕುಮಾರ್ ಕುಡಿಗನೂರು, ನಗರ ಸೇವಕರಾದ ರೇಷ್ಮಾ ಪಾಟೀಲ್, ಶಂಕರ್ ಗೌಡ, ಸಂಜಯ್ ಬಾವಿ, ಎಪಿಎಂಸಿ ಯ ಎಲ್ಲಾ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ರಾಜ್ಯ ಸದಸ್ಯರಾದ ಜ್ಯೋತಿ ದೀಪಕ್ ಶೆಟ್ಟಿ ಆಯೋಜಿಸಿದ್ದರು.
ಕಾರ್ಯಕ್ರಮದ ಮೂಲಕ ಸುಮಾರು 200 ಗಿಡಗಳನ್ನು ಮಾರುಕಟ್ಟೆಗಳ ಪ್ರದೇಶದಲ್ಲಿ ನೆಡಲಾಗಿ ಹಸಿರು ವಾತಾವರಣ ನಿರ್ಮಿಸುವಲ್ಲಿ ಕೈ ಜೋಡಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ