Beereshwara add4
Crease wise add 8
KLE1099 Add

ಮೂಗಿನ ದ್ರವದ ಮಾದರಿ ಸಂಗ್ರಹಿಸುವಾಗ ಮೆದುಳಿನ ಪರದೆ ಛಿದ್ರ

ಕೊರೋನಾ ಸೋಂಕು ಪರೀಕ್ಷೆ ವೇಳೆ ಘಟನೆ

ಕೊರೋನಾ ಸೋಂಕು ಪರೀಕ್ಷೆ ವೇಳೆ ಘಟನೆ

ನ್ಯೂಯಾರ್ಕ್:  ಮಹಿಳೆಯೊಬ್ಬರ ಕೋವಿಡ್ ಪರೀಕ್ಷೆಗಾಗಿ ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸುವಾಗ ಆಕಸ್ಮಿಕವಾಗಿ ಮೆದುಳಿನ ಪರದೆ ಛಿದ್ರವಾಗಿರುವ ಆಘಾತಕಾರಿ ಘಟನೆ ಅಮೇರಿಕಾದಲ್ಲಿ ನಡೆದಿದೆ.
   ಕೋವಿಡ್ ಪರೀಕ್ಷೆಗೆ ಗಂಟಲು ಅಥವಾ ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಎರಡೂ ವಿಧಾನವೂ ಸುರಕ್ಷಿತ ಎಂದೇ ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ಅಮೇರಿಕದ 40 ವರ್ಷದ ಮಹಿಳೆಯ ಮೂಗಿನ ದ್ರವದ ಮಾದರಿ ಸಂಗ್ರಹಿಸುವಾಗ ಈ ಅಚಾತುರ್ಯ ನಡೆದಿರುವುದು ಅಲ್ಲಿನ ಮೆಡಿಕಲ್ ಜರ್ನಲ್ ನಲ್ಲಿ ಗುರುವಾರ ವರದಿಯಾಗಿದೆ.
 ಈ ಘಟನೆಯಿಂದಾಗಿ ತೀವ್ರವಾದ ಸೈನಸ್ ಸಮಸ್ಯೆ ಇದ್ದು ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಮೂಗಿನದ್ರವದ ಮಾದರಿ ಸಂಗ್ರಹಿಸುವುದು ಸೂಕ್ತವೇ ಎಂಬ ಬಗ್ಗೆ ಯೋಚಿಸುವಂತಾಗಿದೆ  ಎಂದು ಮೆಡಿಕಲ್ ಜರ್ನಲ್ ನ ಲೇಖಕಿ ಜರೆಟ್ ವಾಲ್ಶ್ ಅಭಿಪ್ರಾಯಪಟ್ಟಿದ್ದಾರೆ.