
ಪ್ರಗತಿವಾಹಿನಿ ಸುದ್ದಿ, ಜಿನೆವಾ: ಅಪರೂಪದ H3N8 ಹಕ್ಕಿ ಜ್ವರದಿಂದ ವಿಶ್ವದ ಮೊದಲ ಮಾನವ ಸಾವು ಚೀನಾದಲ್ಲಿ ಸಂಭವಿಸಿದೆ.
ಮಹಿಳೆಯೊಬ್ಬರು H3N8 ಜ್ವರದಿಂದ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಗುವಾಂಗ್‌ಡಾಂಗ್‌ನ 56 ವರ್ಷದ ಮಹಿಳೆ H3N8 ಉಪವಿಧದ ಸೋಂಕಿಗೆ ಒಳಗಾದ ಮೂರನೇ ವ್ಯಕ್ತಿ ಎಂದು WHO ತಿಳಿಸಿದೆ.
ಕೋವಿಡ್ -19ಕ್ಕೆ ಜನ್ಮ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕುಖ್ಯಾತಿಗೆ ಒಳಗಾಗಿದ್ದ ಚೀನಾದಲ್ಲೇ ಈ ಎಲ್ಲ ಪ್ರಕರಣಗಳು ದಾಖಲಾಗಿದ್ದು ಮೊದಲ ಎರಡು ಪ್ರಕರಣಗಳು ಕಳೆದ ವರ್ಷ ವರದಿಯಾಗಿದ್ದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ