Latest

8 ಜಿಲ್ಲೆಗಳಲ್ಲಿ ಚಿಂತಾಜನಕ ಸ್ಥಿತಿ

 ಪ್ರಗತಿವಾಹಿನಿ ಸುದ್ದಿ, ಮುಂಬೈ –  ಮಹಾರಾಷ್ಟ್ರ ರಾಜ್ಯದಲ್ಲಿ ಕರೋನಾ  ಎರಡನೇ ಅಲೆ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ, ಸಂಪೂರ್ಣವಾಗಿ ಕಡಿಮೆಯಾಗಲು ಮೊದಲ ಅಲೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ಆದ್ದರಿಂದ ಎರಡನೇ ಅಲೆ ಪರಿಣಾಮ ಹೆಚ್ಚು ಕಾಲ ಉಳಿಯಲಿರುವ ಸಾಧ್ಯತೆ ಇದೆ. ಅದರಲ್ಲೂ ಎಂಟು ಜಿಲ್ಲೆಗಳಲ್ಲಿ ಸೊಂಕಿತರ ಸಂಖ್ಯೆ ಇನ್ನೂ ಶೇ.ಐದರಷ್ಟು ಇರುವುದರಿಂದ ಅಲ್ಲಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

Related Articles

ಕಡಿಮೆಯಾಗಿರುವ ಟೆಸ್ಟಿಂಗ್, ಬಾಧಿತರ  ಸಂಪರ್ಕದಲ್ಲಿ ಬಂದ ವ್ಯಕ್ತಿಗಳ ಕಡಿಮೆ ಪ್ರಮಾಣದಲ್ಲಿ ಶೋಧ, ಮತ್ತು ಕರೋನಾ ತಡೆಗಟ್ಟುವ ನಿಯಮಗಳ ಉಲ್ಲಂಘನೆಯಿಂದಾಗಿ ಎರಡನೇ ಅಲೆ ಪರಿಣಾಮವು ದಿರ್ಘಕಾಲಿಕವಾಗಿದೆ ಎಂದು ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ.
ಮೊದಲ ಅಲೆ ಮಾರ್ಚ್ 2020 ರಲ್ಲಿ ಪ್ರಾರಂಭವಾಗಿ, ಅಕ್ಟೋಬರ್‌ನಿಂದ ರೋಗಿಗಳ ಸಂಖ್ಯೆ ಕ್ಷೀಣಿಸಲು ಪ್ರಾರಂಭವಾಯಿತು.
ಎರಡನೇ ಅಲೆ ಸಾಧರಣವಾಗಿ ಫೆಬ್ರವರಿ 2021 ರಿಂದ  ಆರಂಭವಾಗಿ ಏಪ್ರಿಲ್‌ನಲ್ಲಿ ಉತ್ತುಂಗಕ್ಕೇರಿ, ವಾರಕ್ಕೆ ರೋಗಿಗಳ ಸಂಖ್ಯೆ ಸುಮಾರು ನಾಲ್ಕೂವರೆ ಲಕ್ಷಕ್ಕೆ ತಲುಪಿತ್ತು. ಮೇ ತಿಂಗಳಿನಿಂದ ಮತ್ತೆ ರೋಗಿಗಳ ಸಂಖ್ಯೆ ಕ್ಷೀಣಿಸಲು ಪ್ರಾರಂಭಿಸಿ  ಸುಮಾರು ಒಂದು ಲಕ್ಷಕ್ಕೆ ಕುಸಿದ ಹೊರತಾಗಿಯೂ, ಜೂನ್‌ನಲ್ಲಿ ರೋಗಿಗಳ ಸಂಖ್ಯೆ ದೀರ್ಘಕಾಲದವರೆಗೆ ಸ್ಥಿರವಾಗಿತ್ತು.
-ಕೊಲ್ಹಾಪುರದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಶೇಕಡಾ 10.24 ರಷ್ಟಿದೆ. ನಂತರ ಸತಾರಾ (ಶೇ .9.14), ಸಾಂಗ್ಲಿ (ಶೇ .8.81), ರಾಯಗಡ್ (ಶೇ 7.88), ಪುಣೆ (ಶೇ 7.68), ರತ್ನಾಗಿರಿ (ಶೇ 7.29), ಸಿಂಧುದುರ್ಗ್ (ಶೇ .6.55), ಪಾಲ್ಘರ್ (ಶೇ 5.26) ಮತ್ತು ಬುಲ್ಡಾಣಾ (ಶೇಕಡಾ 4.57) ಈ ಜಿಲ್ಲೆಗಳಲ್ಲಿ ಭಾದಿತರ ಸಂಖ್ಯೆ ಅಧಿಕವಾಗಿದೆ.
– ಕೋಲ್ಹಾಪುರ, ಸತಾರಾ, ಸಾಂಗ್ಲಿ ಮತ್ತು ಪುಣೆ ಜಿಲ್ಲೆಗಳಲ್ಲಿ ಸೋಂಕು ಜೂನ್ ಕೊನೆಯ ವಾರದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು ಆದರೆ 27 ರಿಂದ ಜುಲೈ 3 ಈ ವಾರದಲ್ಲಿ ಮತ್ತೆ ಏರಿಕೆಯಾಗಿದೆ.

ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆತಂಕ: ಇದೇ ಮತ್ತೆ ಲಾಕ್ ಡೌನ್ ಗೆ ಕಾರಣವಾಗುವ ಸಾಧ್ಯತೆ

Home add -Advt

ಜುಲೈ 19ರಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್?

Related Articles

Back to top button