Latest

ದೆಹಲಿ ಫುಟ್‌ಪಾತ್‌ನಲ್ಲಿ ಮಲಗಿದ ಕುಸ್ತಿ ಪಟುಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಿಡಿದೆದ್ದು ಪ್ರತಿಭಟನೆಗಿಳಿದಿರುವ ಕುಸ್ತಿಪಟುಗಳು ದೆಹಲಿಯ ಫುಟ್‌ಪಾತ್‌ನಲ್ಲಿ ಮಲಗಿರುವ ದೃಷ್ಯ ಎಲ್ಲೆಡೆ ಗಮನ ಸೆಳೆದಿದೆ.

ಪ್ರತಿಭಟನಾಕಾರ ಕುಸ್ತಿಪಟುಗಳು ಚಾದರ ಹೊದ್ದುಕೊಂಡು ಫುಟ್‌ಪಾತ್‌ನಲ್ಲಿ ಮಲಗಿರುವ ಫೋಟೊಗಳನ್ನು ಭಾರತದ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ವಿನೇಶ್ ಫೋಗಟ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಭಟನಾನಿರತ ಕುಸ್ತಿಪಟುಗಳು ಬ್ರಿಜ್ ಭೂಷಣ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ತನಿಖೆಯ ವಿವರಗಳನ್ನು ಕೇಳುತ್ತಿದ್ದಾರೆ. ಇದಕ್ಕಾಗಿ ಪ್ರತಿಭಟನೆಗಿಳಿದಿರುವ ಕುಸ್ತಿಪಟುಗಳು ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಈ ವೇಳೆ ರಾತ್ರಿ ಇವರೆಲ್ಲ ಪ್ರತಿಭಟನಾರ್ಥವಾಗೇ ಫುಟ್‌ಪಾತ್‌ನಲ್ಲಿ ಮಗಲಿದ್ದಾರೆ.

“ಪೋಡಿಯಂನಿಂದ ಪಾದಚಾರಿ ಮಾರ್ಗದವರೆಗೆ. ಮಧ್ಯರಾತ್ರಿ ತೆರೆದ ಆಕಾಶದ ಅಡಿಯಲ್ಲಿ ನ್ಯಾಯದ ಭರವಸೆಯಲ್ಲಿ” ಎಂದು ವಿನೇಶ್ ಫೋಗಟ್ ಟ್ವೀಟ್ ಮಾಡಿದ್ದಾರೆ.

https://pragati.taskdun.com/bjps-hindutva-strategy-wont-work-this-time-dk-shivakumar/

https://pragati.taskdun.com/congress-star-campaigner-priyanka-gandhi-visits-mysuru-tomorrow/

https://pragati.taskdun.com/lokayukta-attacks-at-dawn-in-different-parts-of-the-state/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button