ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ದೇವಸ್ಥಾನದಿಂದ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಹಿಳೆ ಅಡ್ಡಗಟ್ಟಿ ಹೊತ್ತೊಯ್ದ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಯಾದಗಿರಿಯ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆ ಹಾಗೂ ಆಕೆಯ ಸಂಬಂಧಿ ದೇವಸ್ಥಾನಕ್ಕೆ ತೆರಳಿ ಬೈಕ್ ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಆಟೋದಲ್ಲಿ ಹಿಂಬಾಲಿಸಿದ ಇಬ್ಬರು ಯುವಕರು, ಯಾದಗಿರಿ ಶಹಾಪುರ ಮಾರ್ಗ ಮಧ್ಯೆ ಬೈಕ್ ಅಡ್ಡಗಟ್ಟಿ, ಮಹಿಳೆ ಹೊತ್ತೊಯ್ದು ಕೃತ್ಯವೆಸಗಿದ್ದಾರೆ.
ಇಬ್ಬರು ಕಾಮುಕರನ್ನು ಬಂಧಿಸಿರುವ ಶಹಾಪುರ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಆಟೋವನ್ನು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಈಶ್ವರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ