EducationKarnataka NewsLatest

*ವಿದ್ಯಾರ್ಥಿಗೆ ಚಡಿ ಏಟು ನೀಡಿ ಬಾಸುಂಡೆ ಬರುವಂತೆ ಹೊಡೆದ ಮೇಸ್ಟ್ರು: ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಶಿಕ್ಷಕನೊಬ್ಬ ನಾಲ್ಕನೇ ತರಗತಿಯ ವಿದ್ಯಾರ್ಥಿಯನ್ನು ಮನಸೋ ಇಚ್ಛೆ ಥಳಿಸಿ ಶಿಕ್ಷೆ ನೀಡಿರುವ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಮಾಹಾವಿರ ಜೈನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದಿದೆ

ಶಿಕ್ಷಕ ಡೆಲ್ವಿನ್ ವಿದ್ಯಾರ್ಥಿ ಮೇಲೆ ನಡೆಸಿರುವ ಕ್ರೌರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಲ್ಕನೇ ತರಗತಿ ವಿದ್ಯಾರ್ಥಿ ಯುವರಾಜ ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾನೆ. ಇದೇ ಕಾರಣಕ್ಕೆ ಶಿಕ್ಷಕ ವಿದ್ಯಾರ್ಥಿಗೆ ಚಡಿ ಏಟು ನೀಡಿದ್ದಲ್ಲದೇ ಬಾಸುಂಡೆ ಬರುವಂತೆ ಥಳಿಸಿದ್ದಾನೆ.

ಶಿಕ್ಷಕನ ಏಟಿಗೆ ವಿದ್ಯಾರ್ಥಿಯ ಮೈ-ಕೈ, ಬೆನ್ನಿಗೆ ಬಾಸುಂಡೆ ಬಂದಿದ್ದು, ಶಿಕ್ಷಕನ ಹೊಡೆತ ತಾಳಲಾರದೇ ಬಾಲಕ ಪೋಷಕರಿಗೆ ತಿಳಿಸಿದ್ದಾನೆ. ಶಿಕ್ಷಕನ ಹೊಡೆತಕ್ಕೆ ಮಗನ ಸ್ಥಿತಿ ಕಂಡ ಪೋಷಕರು ಸೈದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿಕ್ಷಕ ಡೆಲ್ವಿನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

Home add -Advt

Related Articles

Back to top button