ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಯಕ್ಸಂಬಾ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.1ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿಯ ನಿರ್ದೇಶಕ ಹಾಗೂ ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.
ಅವರು ತಾಲೂಕಿನ ಯಕ್ಸಂಬಾದ ಜ್ಯೋತಿ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಿಸಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮತು ಸಚಿವೆ ಶಶಿಕಲಾ ಜೊಲ್ಲೆಯವರ ನೇತೃತ್ವದಲ್ಲಿ ಕಳೆದ 28 ವರ್ಷಗಳ ಹಿಂದೆ ಹುಟ್ಟು ಹಾಕಿರುವ ಜ್ಯೋತಿ ಸೌಹಾರ್ದ ಸಹಕಾರಿಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.
2020-21 ನೇ ಸಾಲಿನ ಶೇರ್ ಬಂಡವಾಳ 50.13 ಲಕ್ಷ ರೂಗಳ ಮೇಲೆ ಶೇ.10ರಷ್ಟು ಲಾಭಾಂಶ ಹಾಗೂ ಸಿಬ್ಬಂದಿಗಳಿಗೆ ಶೇ. 8.33 ರಷ್ಟು, ಅಂದರೆ ಬೋನಸ್ ಅಂದರೆ 5.1 ಲಕ್ಷ ಸಾವಿರ ರೂಗಳನ್ನು ಸಹಕಾರಿಯ 14199 ಸದಸ್ಯರಿಗೆ ವಿತರಿಸುತ್ತಿದೆ ಎಂದರು.
169.62 ಕೋಟಿ ರೂ.ಗಳಷ್ಟು ಠೇವುಗಳನ್ನು ಸಂಗ್ರಹಿಸಿ, 73.14 ಕೋಟಿ ರೂ.ಗಳಷ್ಟು ಸಾಲ ವಿತರಿಸಿದೆ. ಸಹಕಾರಿಯೂ 181.30 ಕೋಟಿ ರೂ.ಗಳಷ್ಟು ದುಡಿಯುವ ಬಂಡವಾಳ ಹೊಂದಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರ ತಳಹದಿಯಲ್ಲಿ ಜ್ಯೋತಿ ಬಜಾರ್, ಔಷಧ ಅಂಗಡಿ, ಪ್ರಿಟಿಂಗ್ ಪ್ರೆಸ್, ಸೇರಿದಂತೆ ಜ್ಯೋತಿ ವಿವಿಧ ಉದ್ದೇಶ ಸೌಹಾರ್ದ ಸಹಕಾರಿಯ 61 ಶಾಖೆಗಳನ್ನು ಹೊಂದಿದ್ದು, ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆ ವ್ಯಾಪ್ತಿಯನ್ನು ಹೊಂದಿದ ಸಹಕಾರಿ ಸಂಸ್ಥೆಗಳನ್ನು ಧಾರವಾಡ, ಗದಗ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಶೀಘ್ರವೇ ಬಾಗಲಕೋಟೆ ಜಿಲ್ಲೆಯ ಲೋಕಾಪುರದಲ್ಲಿ ಶಾಖೆ ಪ್ರಾರಂಭಿಸಲಿದೆ ಎಂದರು.
ಸಹಕಾರಿಯ ಹೊಸ ಬೆಳವಣಿಗೆಗಳು:
ನಿಪ್ಪಾಣಿ ಕೇಂದ್ರ ಸ್ಥಾನವಾಗಿರಿಸಿಕೊಂಡು ತಾಲೂಕಿನಾದ್ಯಂತ ಹಿಂದೂಸ್ಥಾನ ಯುನಿಲಿವರ್ ಲಿಮಿಟೆಡ್ ಡಿಸ್ಟ್ರಿಬ್ಯೂಷನ್ ಪಡೆದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಕ್ಸಂಬಾದಲ್ಲಿ ವಿವಿಧ ಕಂಪನಿಗಳ ಹಂಚಿಕೆ, ಸಹಕಾರಿ ಸಾಲ ವಿತರಣೆ ಲೋನ್ ಸಾಫ್ಟವೇರ್ ಅಳವಡಿಸಲಾಗಿದೆ.
ಇತರೆ ಉತ್ಪನ್ನ ವಿಭಾಗದಲ್ಲಿ ಮಿನಿ ಎಟಿಎಂ, ಫಾಸ್ಟ್ ಟ್ಯಾಗ್, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಅ.15 ರಿಂದ ನ.15 ರವರೆಗೆ
18 ತಿಂಗಳ ನಿಗದಿತ ಅವಧಿಗೆ ಠೇವಣಿ ಇಟ್ಟ ಹಣಕ್ಕೆ ಶೇ.9.5 ಮತ್ತು ವಿಧವೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ ಶೇ.10 ರಷ್ಟು ಬಡ್ಡಿದರದ ವಿಶೇಷ ಯೋಜನೆ ಜಾರಿಗೆ ತಂದಿದೆ ಎಂದು ಬಸವಪ್ರಸಾದ ಜೊಲ್ಲೆ ತಿಳಿಸಿದರು.
ಸಹಕಾರಿಯ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ, ಅಧ್ಯಕ್ಷ ಚಂದ್ರಕಾಂತ ಖೋತ, ಉಪಾಧ್ಯಕ್ಷ ಬಿ.ಎನ್.ಮಾಳಿ, ನಿರ್ದೇಶಕ ಕಲ್ಲಪ್ಪಾ ಜಾಧವ, ಕಲ್ಲಪ್ಪಾ ನಾಯಕ, ಜ್ಯೋತಿ ಗಿಡ್ಡ, ವಿಶ್ವನಾಥ ಪೇಟಕರ, ರಮೇಶ ಚೌಗಲೆ, ಶರ್ಫುದ್ದೀನ್ ಮುಲ್ಲಾ, ಕೃಷ್ಣಪ್ಪಾ ಪೂಜಾರಿ, ಪ್ರಧಾನ ವ್ಯವಸ್ಥಾಪಕ ವಿಜಯ ಕಟಕಬಾವಿ, ಉಪಪ್ರಧಾನ ವ್ಯವಸ್ಥಾಪಕ ಸಂತೋಷ ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂತೋಷ ಪೂಜಾರಿ, ಸದಾಶಿವ ಕಮತೆ, ವ್ಯವಸ್ಥಾಪಕ ತಾನಾಜಿ ಶೀಂಧೆ, ಸಂತೋಷ ಗುಂಡಪ್ಪನವರ ಉಪಸ್ಥಿತರಿದ್ದರು.
ಟಿಪ್ಪರ್- ಬೈಕ್ ಮಧ್ಯೆ ಡಿಕ್ಕಿ; ಬೈಕ್ ಸವಾರರು ಸ್ಥಳದಲ್ಲೇ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ