Kannada NewsKarnataka NewsLatest
*ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಕನ್ನಡ ಪ್ರಾಧಿಕಾರದ ಅಧ್ಯಕ್ಷರಿಂದ ವಿವಾದಾತ್ಮಕ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೊತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಕ್ಷಗಾನ ಕಲಾವಿದರು ಬಹುತೇಕರು ಸಲಿಂಗಿಗಳು ಎಂದು ಹೇಳಿದ್ದಾರೆ.
ಯಕ್ಷಗಾನ ಕಲಾವಿದರು ಮೇಳಕ್ಕೆಂದು 6-8ತಿಂಗಳು ತಿರುಗಾಟದಲ್ಲಿಯೇ ಇರುತ್ತಾರೆ. ಇದರಿಂದ ಅವರಿಗೆ ಯಾರೂ ಹೆಣ್ಣುಕೊಡುತ್ತಿರಲಿಲ. ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಅವರುಗೆ ಮರುದಿನ ಪದ್ಯವನ್ನೇ ಕೊಡುತ್ತಿರಲಿಲ್ಲ. ಎಂದು ಹೇಳಿಕೆ ನೀಡಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರೊ. ಪುರುಷೋತ್ತಮ ಬಿಳಿಮಲೆ, ಸತ್ಯವನ್ನು ಹೇಳಲು ಹಿಂಜಿರಿಯಬಾರದು. ಎಲ್ಲರೂ ಅಲ್ಲ, ಕೆಲ ಯಕ್ಷಗಾನ ಕಲಾವಿದರುಸಲಿಂಗಿಗಳು ಹೌದು. ಈ ವಿಚಾರವನ್ನು ನಾನು ಹೊಸದಾಗಿ ಹೇಳುತ್ತಿಲ್ಲ, ಹಲವು ವರ್ಷಗಳಿಂದ ಯಕ್ಷಗಾನ ನೋಡುತ್ತಿದ್ದೇನೆ. ನನ್ನ ಉದ್ದೇಶ ಯಕ್ಷಗಾನ ಕಲಾವಿದರನ್ನು ನೋಯಿಸುವುದಲ್ಲ ಎಂದು ಹೇಳಿದ್ದಾರೆ.




