*ಯಲಿಹಡಲಗಿ ಸೋಮನಾಥ ಮಂದಿರ ಉತ್ತರ ಕರ್ನಾಟಕದ ವಿಶೇಷ ಮಂದಿರವಾಗಲಿದೆ*

ಪ್ರಗತಿವಾಹಿನಿ ಸುದ್ದಿ: ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ 50 ಲಕ್ಷ ರೂಪಾಯಿ ಮೊತ್ತದಲ್ಲಿ ನೂತನ ಸೋಮನಾಥ ಮಂದಿರವು ವಿಶೇಷ ಮಂದಿರವಾಗಿ, ನೆಲ ಮಹಡಿಯಲ್ಲಿ ಸ್ವಯಂಭು ಪಾದರಸದ ಶಿವಲಿಂಗ ಹಾಗೂ ಮೇಲಿನ ಅಂತಸ್ತಿನಲ್ಲಿ ಮಹಾದೇವ ಮಂದಿರವಾಗುತ್ತಿದ್ದು ಗರ್ಭಗುಡಿಯ ಕಟ್ಟಡದ ಪ್ರಾರಂಭ ನಿರ್ಮಾಣ ಕಾಮಗಾರಿಗೆ ಸವದತ್ತಿ ಓಂಕಾರ ಮಠದ ಪ.ಪೂ.ಶ್ರೀ ಶಿವಶಕ್ತಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗ ಮಂದಿರ ಶ್ರೇಷ್ಠ ಮಂದಿರ. ಪಾದರಸ ಶಿವಲಿಂಗವನ್ನು ಸ್ಪರ್ಶಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿ ಬರುತ್ತದೆ. ಎಂಬ ಉದ್ದೇಶದಿಂದ ಈ ಮಂದಿರ ಸ್ಥಾಪಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಆದಿಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಅಜ್ಜಪ್ಪಾ ನಾಗರಾಳೆ, ಶ್ರೀಶೈಲ ಡಂಗಿ, ಲಕ್ಷ್ಮಣ ಮಗದುಮ್ಮ, ಕಲ್ಲಪ್ಪ ನವಲಗಿ, ಗಂಗಪ್ಪಾ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಬಿರಾದಾರ,ಸ್ಥಳೀಯ ಮುಖಂಡರು,ಸಮಾಜದ ಮುಖಂಡರು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.