ಪ್ರಗತಿವಾಹಿನಿ ಸುದ್ದಿ; ಉಗರಗೋಳ (ಸವದತ್ತಿ): ಕೋವಿಡ್ ನಿಯಂತ್ರಣಕ್ಕಾಗಿ ಯಲ್ಲಮ್ಮ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಈವರೆಗಿನಂತೆ ಮುಂದೆಯೂ ಭಕ್ತರು ಸಹಕಾರ ನೀಡಬೇಕು. ಸರ್ಕಾರ ಕಾಲಕಾಲಕ್ಕೆ ಪ್ರಕಟಿಸುವ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಸೂಚಿಸಿದರು.
ಯಲ್ಲಮ್ಮ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ಯಲ್ಲಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಯಲ್ಲಮ್ಮ ದೇವಿ ದರ್ಶನ ಪಡೆಯುತ್ತಿದ್ದರು. ಕರೊನಾ ನಿರ್ಮೂಲನೆಯಾಗಿ ಮತ್ತೆ ಅಂತಹ ಕಾಲ ಬರಲಿದೆ. ಅಲ್ಲಿಯವರೆಗೂ ಭಕ್ತರು ಸಹಕರಿಸಬೇಕು. ತಮ್ಮ ಮನೆಗಳಲ್ಲೇ ಪೂಜೆ-ಪುನಸ್ಕಾರ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ಗರ್ಭಗುಡಿಯಲ್ಲಿ ಗೌರಿ ಗಣೇಶ ಪೂಜೆಯನ್ನು ಅಧಿಕಾರಿಗಳ ಸಮ್ಮಖದಲ್ಲಿ ನೇರವೆರಿಸಲಾಯಿತು.
ಜನತಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ