
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಜಮೀನಿನ ಗಡಿ ವಿವಾದ ಹಿನ್ನೆಲೆಯಲ್ಲಿ ವೃದ್ಧರೊಬ್ಬರನ್ನು ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನು ಯಮಕನಮರಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶ್ರೀಕಾಂತ ಬೀರಪ್ಪ ಯರ್ನಾಳ (24) ಬಂಧಿತ ಆರೋಪಿ. ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಈತ ಜ.4ರಂದು ಸಂಕಣ್ಣ ಯರ್ನಾಳ (80) ಎಂಬುವವರಿಗೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿದ್ದ.
ಚಿಕಿತ್ಸೆ ಫಲಕಾರಿಯಾಗದೆ ಸಂಕಣ್ಣ ಅವರು ಗೋಕಾಕದ ಆಸ್ಪತ್ರೆಯಲ್ಲಿ ಜ.5ರಂದು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಪೊಲೀಸರು ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.
https://pragati.taskdun.com/murder-in-yamakanamaradi-station-limits/
*ಸ್ಯಾಂಟ್ರೋ ರವಿ ಅವ್ಯವಹಾರ ಪ್ರಕರಣ : ವಿವರವಾದ ತನಿಖೆಯಿಂದ ನಿಜಬಣ್ಣ ಬಯಲಾಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/santro-ravi-casecm-basavaraj-bommaireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ