ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ: ತಾಲೂಕಿನ ತಲ್ಲೂರ ಗ್ರಾಮದ ಯಲ್ಲಮ್ಮನ ಭಕ್ತರು ಮಂಗಳವಾರ ಯಲ್ಲಮ್ಮನನ್ನು ನೆನೆದು ತಲ್ಲೂರಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ, ಯಲ್ಲಮ್ಮನಿಗೆ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಿದ್ದು ಮಹಾರಾಷ್ಟ್ರದ ಯಲ್ಲಮ್ಮನ ಭಕ್ತರು ಯಲ್ಲಮ್ಮನಗುಡ್ಡಕ್ಕೆ ಆಗಮಿಸುತ್ತಿರುವುದರಿಂದ ಕೊರೊನಾ ವ್ಯಾಪಕವಾಗಿ ಹರಡಬಹುದು ಎಂಬ ಉದ್ದೇಶದಿಂದ ಈಗಾಗಲೇ ಜಿಲ್ಲಾಧಿಕಾರಿ ಯಲ್ಲಮ್ಮನ ದೇವಸ್ಥಾನಕ್ಕೆ ನವೆಂಬರ್ ತಿಂಗಳ ಅಂತ್ಯದ ವರೆಗೂ ನಿರ್ಬಂಧ ಹೇರಿದ್ದಾರೆ.
ಸಾಮೂಹಿಕವಾಗಿ ಯಲ್ಲಮ್ಮನಿಗೆ ಮಾಡುವ ವಿಧಿ ವಿಧಾನಗಳ ಬಗ್ಗೆ ಅಪಾರ ನಂಬಿಕೆ ಹೊಂದಿದ ತಲ್ಲೂರಿನ ಭಕ್ತರು ಯಲ್ಲಮ್ಮನ ವಾರವಾದ ಮಂಗಳವಾರದಂದು ನಿಯಮಾದಿಗಳನ್ನು ಅಲ್ಲಗಳೆಯದೆ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ, ಯಲ್ಲಮ್ಮನಿಗೆ ಸಾಮೂಹಿಕವಾಗಿ ಹಡ್ಡಲಗಿ ತುಂಬಿ ಮತ್ತು ಇನ್ನಿತರ ನಿಯಮಾದಿಗಳನ್ನು ನೆರವೇರಿಸಿ ಯಲ್ಲಮ್ಮನನ್ನು ನೆನೆದುಕೊಳ್ಳುವ ಮೂಲಕ ಎಲ್ಲಾ ನೀನೆ ತಾಯೆ, ಎಲ್ಲೆಲ್ಲೂ ನಿನ್ನ ಮಾಯೆ ಎಂದು ಭಕ್ತಿ ಮೆರೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ