
ಪ್ರಗತಿವಾಹಿನಿ ಸುದ್ದಿ; ಮುಂಬೈ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯರವಾಡ ಜೈಲಿನ ಬ್ಯಾರಕ್ ನಲ್ಲಿ ನಡೆದಿದೆ.
53 ವರ್ಷದ ಗಣೇಶ್ ತಾಂಬೆ ಆತ್ಮಹತ್ಯೆಗೆ ಶರಣಾದ ಕೈದಿ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣ ಸಂಬಂಧ ಆರೋಪಿ 2011ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಜೈಲಿನಲ್ಲಿ ಅಡುಗೆ ಮನೆ ಕೆಲಸ ಮುಗಿಸಿದ್ದ ತಾಂಬೆ ಬಳಿಕ ಬ್ಯಾರಕ್ ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇತರ ಕೈದಿಗಳು ತಾಂಬೆ ಶವ ಕಂಡು ಜೈಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅವಾಚ್ಯ ಶಬ್ಧಗಳಿಂದ ಸಿಎಂ ನಿಂದನೆ; ಆರೋಪಿ ಬಂಧನಕ್ಕೆ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ