ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಅಧಿಕೃತವಾಗಿ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಾಟ್ಸಪ್ ನಲ್ಲಿ ಬಂದ ನೋಟಿಸ್ ನ್ನು ಹೇಗೆ ನಂಬಲಿ? ಅದು ವಿಜಯೇಂದ್ರನೇ ಕಳುಹಿಸಿರುವ ನಕಲಿ ನೋಟಿಸ್ ಇರಬಹುದು ಎಂದಿದ್ದಾರೆ.
ವಿಜಯೇಂದ್ರ ಬಹಳ ಚಾಲೂ ಇದ್ದಾನೆ. ಈ ಹಿಂದೆ ಅವರ ಅಪ್ಪನ ಸಹಿ ಮಾಡಿ ಫೈಲ್ ಕ್ಲೀಯರ್ ಮಾಡಿದ್ದಾನೆ ಎಂದು ಹರಿಪ್ರಸಾದ್ ಈ ಬಗ್ಗೆ ಆರೋಪ ಮಾಡಿದ್ದರು. ಇನ್ನು ನನಗೆ ಕಳುಹಿಸಿರುವ ನೋಟಿಸ್ ಡೂಪ್ಲಿಇಕೇಟ್ ಅಲ್ಲ ಎಂದು ಹೇಗೆ ನಂಬಲಿ. ಇ-ಮೇಲ್ ಮೂಲಕ, ಪೋಸ್ಟ್ ಮೂಲಕ ನೋಟಿಸ್ ಬಂದಿದ್ದರೆ ನಂಬಬಹುದು. ಅಂತಹ ಯಾವುದೇ ನೋಟಿಸ್ ಬಂದಿಲ್ಲ ಎಂದರು.
ಒಂದು ವೇಳೆ ವರಿಷ್ಠರು ನೋಟಿಸ್ ನೀಡಿದರೆ ನನ್ನ ಬಳಿ ಉತ್ತರ ರೆಡಿ ಇಇದೆ. ಅದಕ್ಕಾಗಿ ಹತ್ತು ದಿನ ಬೇಕಿಲ್ಲ ಎಂದು ಹೇಳಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ