Kannada NewsKarnataka NewsLatest

ಯಡಿಯೂರಪ್ಪ ರಾಷ್ಟ್ರಪತಿಯಾಗ್ತಾರೆ, ಮಂಗಲಾ ಅಂಗಡಿ 40 ಸಾವಿರ ಮತದಿಂದ ಗೆಲ್ತಾರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಲೋಕಸಭಾ ಉಪ ಚುನಾವಣೆ ಪ್ರಚಾರಕ್ಕೆ ಹುಬ್ಬಳ್ಳಿಯಿಂದ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಸಂಜೆ ನಗರದ ಹೊರಭಾಗದಲ್ಲಿರುವ ಮುತ್ನಾಳದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಹೀರೆಮಠಕ್ಕೆ ಹಾಗೂ ಹಲಗಾ ಜೈನ ಮಂದಿರದ ಬಾಲಾಚಾರ್ಯ 108 ಸಿದ್ದಸೇನಾ ಮಹಾರಾಜರ ಮಠಗಳಿಗೆ ಭೇಟಿ ನೀಡಿ ಆಶಿರ್ವಾದ ಪಡೆದರು.

ಜೈನ ಮಂದಿರದ ಬಾಲಾಚಾರ್ಯ 108 ಸಿದ್ದಸೇನಾ ಮಹಾರಾಜರು ಆಶಿರ್ವಾದ ನೀಡಿ, ನೀವು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸುತ್ತೀರಿ. ನಂತರ ರಾಜ್ಯಪಾಲ, ರಾಷ್ಟ್ರಪತಿಯಾಗುತ್ತೀರಿ ಎಂದು ಭವಿಷ್ಯ ನುಡಿದರು.

ಜೊತೆಗೆ ಮಂಗಲಾ ಅಂಗಡಿ 40 ಸಾವಿರ ಮತಗಳಿಂದ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ‌ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಆಹಾರ ನಾಗರಿಕಾ ಸಚಿವ ಉಮೇಶ ಕತ್ತಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಅಭ್ಯರ್ಥಿ ಮಂಗಲಾ ಅಂಗಡಿ, ಭಾರತಿ ಮಗದುಮ್ಮ, ಶಂಕರಗೌಡ ಪಾಟೀಲ, ಧನಂಜಯ ಜಾಧವ, ಘೂಳಪ್ಪ ಹೊಸಮನಿ, ಎಫ್.ಎಸ್.ಸಿದ್ದನಗೌಡರ, ಅಭಯ ಅವಲಕ್ಕಿ, ಚೇತನ ಅಂಗಡಿ, ವಿಶಾಲ ಪಾಟೀಲ ಮುಂತಾದವರು ಇದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button