ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯೆಸ್ ಬ್ಯಾಂಕನ್ನು ಸೂಪರ್ಸೀಡ್ ಮಾಡಿರುವ ಆರ್ಬಿಐ ಆ ಬ್ಯಾಂಕ್ ಪುನಶ್ಚೇತನಕ್ಕೆ ರೂಪುರೇಷೆ ಹಾಕಿದೆ. ಯೆಸ್ ಬ್ಯಾಂಕನ್ನು ರಕ್ಷಿಸಬೇಕಾಗಿರುವುದು ಅನಿವಾರ್ಯವಾಗಿದೆ. ಯೆಸ್ ಬ್ಯಾಂಕ್ನ ಪುನಶ್ಚೇತನಕ್ಕೆ ರೂಪಿಸಲಾಗಿರುವ ಕರಡು ಯೋಜನೆಯ ಪ್ರತಿ ತಮಗೆ ಸಿಕ್ಕಿದೆ ಎಂದು ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಯೆಸ್ ಬ್ಯಾಂಕ್ನ ಪುನಶ್ಚೇತನಕ್ಕೆ ರೂಪಿಸಲಾಗಿರುವ ಕರಡು ಯೋಜನೆಯ ಪ್ರತಿ ನಮಗೆ ಸಿಕ್ಕಿದೆ. ಈ ನಿಟ್ಟಿನಲ್ಲಿ ನಮ್ಮ ಹೂಡಿಕೆ ತಂಡ ಹಾಗೂ ಕಾನೂನು ತಂಡ ಕಾರ್ಯೋನ್ಮುಖವಾಗಿವೆ. ಈ ಕರಡು ಯೋಜನೆಯನ್ನು ನೋಡಿ ಅನೇಕ ಸಂಭಾವ್ಯ ಹೂಡಿಕೆದಾರರು ಎಸ್ಬಿಐ ಬಳಿ ಬರುತ್ತಿದ್ದಾರೆ ಎಂದು ರಜನೀಶ್ ಕುಮಾರ್ ಹೇಳಿದರು.
ಎಸ್ಬಿಐ ವಿವಿಧ ಹೂಡಿಕೆದಾರರನ್ನು ಆಹ್ವಾನಿಸುತ್ತಿದೆ. ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡಲು ಹಲವರಿಗೆ ಉತ್ಸಾಹ ಇದೆ. ಶೇ. 5ಕ್ಕಿಂತ ಹೆಚ್ಚು ಪಾಲಿನಷ್ಟು ಹಣ ಹೂಡಿಕೆ ಮಾಡಬಲ್ಲಂಥವರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದರು.
ಯೆಸ್ ಬ್ಯಾಂಕ್ನ ಪುನರ್ನಿರ್ಮಾಣಕ್ಕೆ ರೂಪಿಸಲಾಗಿರುವ ಕರಡು ಯೋಜನೆ ಪ್ರಕಾರ ಆ ಬ್ಯಾಂಕ್ನಲ್ಲಿ ಹೂಡಿಕೆ ಮಾಡುವವರು ಶೇ. 49ರಷ್ಟು ಪಾಲನ್ನು ಖರೀದಿಸಬೇಕಾಗುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಈ ಪಾಲು ಶೇ. 26ಕ್ಕಿಂತ ಕಡಿಮೆ ಇರಕೂಡದು ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ