Belagavi NewsBelgaum News

*ಯಕ್ಸಂಬಾದಲ್ಲಿ‌ ಜೊಲ್ಲೆ ಗ್ರೂಪ್ ವತಿಯಿಂದ ಶ್ರಧ್ದಾ ಭಕ್ತಿಯಿಂದ ಜರುಗಿದ ಕುಂಕುಮಾರ್ಚನೆ ಕಾರ್ಯಕ್ರಮ*

ಕುಂಕುಮಾರ್ಚನೆಯು ಧರ್ಮ ಪಾಲನೆಯ ಒಂದು ಭಾಗ: ಅಲ್ಕಾತಾಯಿ ಇನಾಮದಾರ

ಪ್ರಗತಿವಾಹಿನಿ ಸುದ್ದಿ: ಧರ್ಮ ಅಂದರೆ ಕರ್ತವ್ಯ. ಧರ್ಮದ ಪರಂಪರೆಯನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು ಹಾಗೂ ಕುಂಕುಮಾರ್ಚಣೆಯು ಧರ್ಮ ಪಾಲನೆಯ ಒಂದು ಭಾಗವಾಗಿದೆ ಎಂದು ರಾಷ್ಟ್ರೀಯ ಸೇವಿಕಾ ಸಮಿತಿಯ ಸಹ ಕಾರ್ಯವಾಹಿಕಿ ಅಲ್ಕಾತಾಯಿ ಇನಾಮದಾರ ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದ ಆವರಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ಕುಂಕುಮಾರ್ಚನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು ತಾಯಂದಿರ ಒಳ್ಳೆಯ ಸಂಸ್ಕಾರದಿಂದ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು.ಸದ್ಯ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಸ್ವಾತಂತ್ರ ಹೋರಾಟದಲ್ಲಿ ದೇಶದ ಮಹಿಳೆಯರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಟವನ್ನು ಮಾಡಿ ದೇಶಕ್ಕೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ಮಕ್ಕಳನ್ನು ಧರ್ಮವಂತರನ್ನಾಗಿ ಬೆಳೆಸಬೇಕು. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ, ಸತಿ ಸಹಗಮನ ಅಂತಹ ಅನಿಷ್ಠ ಪದ್ಧತಿಗಳು ನಶಿಸಿ ಹೋಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಧರ್ಮದಿಂದ ದೇಶದ ಸಂಸ್ಕೃತಿ,ಪರಂಪರೆ ಉಳಿಯಲು ಸಾಧ್ಯ. ಕುಂಕುಮಾರ್ಚನೆಯ ಮೂಲಕ ಧರ್ಮ,ಸಂಸ್ಕೃತಿ ರಕ್ಷಣೆಯ ನಮ್ಮ ಜವಾಬ್ದಾರಿಯಾಗಿದೆ. ಅದಲ್ಲದೆ ಭಾರತೀಯ ಸಂಸ್ಕೃತಿಯು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.

ಈ ವೇಳೆ ಮಾತನಾಡಿದ ರಾಷ್ಟ್ರೀಯ ಸೇವಿಕಾ ಸಮಿತಿಯ ಸಹ ಕಾರ್ಯವಾಹಿಕಿ ಅಲ್ಕಾತಾಯಿ ಇನಾಮದಾರ, ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವರು ನೆಲೆಸಿರುವನು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಗೌರವವಿದೆ. ಅಲ್ಕಾತಾಯಿ ಇನಾಮದಾರ ಅವರು ದೇಶಕ್ಕಾಗಿ ಮಾಡುವ ಕಾರ್ಯ ನಿಜಕ್ಕೂ ಪ್ರಶಂಸನೀಯ. ಅವರ ಕಾರ್ಯಗಳು ನಮಗೆ ಸ್ಪೂರ್ತಿ. ಮೂರು ಬಾರಿ ಶಾಸಕಿಯಾಗಿ, ಸಚಿವೆಯಾಗಿ ಕಾರ್ಯವನ್ನು ಮಾಡಿಕೊಂಡು ಬಂದಿದ್ದು, ಮಹಿಳೆಯರಿಗೆ ಹೊಸ ಚೈತನ್ಯವನ್ನು ತುಂಬಲು ಕುಂಕುಮಾರ್ಚನೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ.ಅದಲ್ಲದೆ ನಮ್ಮ ಜೊಲ್ಲೆ ಗ್ರೂಪ ವತಿಯಿಂದ ಮಹಿಳೆಯರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬಂದಿದ್ದೇವೆ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕೊಲ್ಲಾಪುರ ಕನೇರಿ ಮಠದ ಜನನಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ! ವರ್ಷಾ ಪಾಟೀಲ ಮಾತನಾಡಿ ಮಹಿಳೆಯರನ್ನು ನೋಡಿದರೆ ದೇವಿಯನ್ನು ನೋಡಿದ ಹಾಗೆ ಭಾವನೆ ವ್ಯಕ್ತವಾಗುತ್ತಿದೆ. ಸದ್ಯ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಇದ್ದಾರೆ. ಜನನಿ ಆಸ್ಪತ್ರೆಗೆ ಜೊಲ್ಲೆ ಗ್ರೂಪ್ ಸಾಕಷ್ಟು ಕೊಡುಗೆಯನ್ನು ನೀಡಿದೆ. ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಿಗೆ ಮುಂಬರುವ ದಿನಗಳಲ್ಲಿ ನಮ್ಮ ಆಸ್ಪತ್ರೆಯಿಂದ ಅತ್ಯಂತ ಕಡಿಮೆ ದರದಲ್ಲಿ ಐ ವಿ ಎಫ್ ಮೂಲಕ ಚಿಕಿತ್ಸೆಯನ್ನು ನೀಡಲಾಗುವುದು ಎಂದರು.

ಬಳಿಕ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವ ಶ್ರದ್ದೆಯಿಂದ ಜರುಗಿತು.


ಈ ಸಂಧರ್ಭದಲ್ಲಿ ನಿಲಮ ಸಂಜಯ ಅಡಕೆ,ಸ್ನೇಹಾ ಅಮೃತ ಕುಲಕರ್ಣಿ,ಪ್ರೀಯಾ ಜೊಲ್ಲೆ, ಯಶಸ್ವಿನಿ ಜೊಲ್ಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button