Kannada NewsKarnataka NewsLatest

18 ವರ್ಷದ ಯುವತಿ ನಾಪತ್ತೆ: ಸುಳಿವು ಸಿಕ್ಕಿದರೆ ಇಲ್ಲಿ ತಿಳಿಸಿ

 ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಯುವತಿ (೧೮ ವರ್ಷ ೪ ತಿಂಗಳು) ಅಕ್ಟೋಬರ್ ೨೪ ರಂದು ನಾಪತ್ತೆಯಾಗಿದ್ದಾಳೆ.

ಎಲ್ಲರೂ ರಾತ್ರಿ ಮಲಗಿದ ಬಳಿಕ ಸಾವಿತ್ರಿ ಕಾತಗಾರ ಎಂಬ ಯುವತಿ ರಾತ್ರಿ ೧೦ ಗಂಟೆಯ ನಂತರ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ತಂದೆ ಸುರೇಶ ಕಾತಗಾರ ನಂದಗಡ ಪೋಲಿಸ್ ಠಾಣೆಯಲ್ಲಿ ಪಿರ್ಯಾದೆ ದಾಖಲಿಸಿದ್ದಾರೆ.

ಸಾವಿತ್ರಿಯ ಎತ್ತರ ೫ ಫೂಟ್,ಮೈ ಬಣ್ಣ ಗೋದಿಗೆಂಪು, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುವಳು. ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ಹೋಗುವಾಗ ಕೆಂಪು ಬಣ್ಣದ ಚೂಡಿದಾರ, ಬಿಳಿ ಬಣ್ಣದ ಪ್ಯಾಂಟ್ ಮತ್ತು ಓಡಣಿ ಧರಿಸಿದ್ದಾಳೆ ಎಂದು ದಾಖಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.

ಸಾವಿತ್ರಿ ಕಾತಗಾರ ಇವಳ ಸುಳಿವು ಸಿಕ್ಕರೆ ನಂದಗಡ ಪೋಲಿಸ್ ಠಾಣೆ  ಫೋನ್ ನಂ. ೦೮೩೩೬-೨೩೬೬೩೩,೯೪೮೦೮೦೪೦೮೭,ಸಿಪಿಐ ಖಾನಾಪುರ ನಂ.೦೮೩೩೬-೨೨೩೨೩೩ ಅಥವಾ ಬೆಳಗಾವಿ ಕಂಟ್ರೋಲ್ ರೂಮ್ ನಂ.೦೮೩೧-೨೪೦೫೨೩೧ ಗೆ ತಕ್ಷಣ ಕರೆ ಮಾಡಲು ಕೋರಲಾಗಿದೆ.

Home add -Advt

(ಈ ಸುದ್ದಿಯನ್ನು ಹೆಚ್ಚು ಜನರಿಗೆ ಶೇರ್ ಮಾಡಿ. ಯುವತಿಯ ಸುಳಿವು ಸಿಕ್ಕರೆ ಪಾಲಕರಿಗೆ ನೆಮ್ಮದಿ ಸಿಗಲಿದೆ)

 

ನೀನು ಗೆದ್ರೆ ಕುಂದಾ ಕೊಡ್ತೀನಿ, ನಾನು ಗೆದ್ರೆ 4 ಬಂಗಾರದ ಬಳೆ ಕೊಡ್ಸು – ಲಕ್ಷ್ಮಿ ಹೆಬ್ಬಾಳಕರ್ ಪಂಥಾಹ್ವಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button