Belagavi NewsBelgaum News
*ಬೆಳಗಾವಿಯಲ್ಲಿ ಹಾಡಹಗಲೇ ಘೋರ ಕೃತ್ಯ; ಸ್ಕ್ರೂಡ್ರೈವರ್ ನಿಂದ ಇರಿದು ಯುವಕನ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ; ಸ್ಕ್ರೂಡ್ರೈವರ್ ನಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್ (22) ಕೊಲೆಯಾದ ದುರ್ದೈವಿ. ಪ್ರೇಯಸಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಯುವತಿಯ ಸಹೋದರ ಮುಜಾಮಿಲ್ ಸತ್ತಿಗೇರಿ ಬೈಕ್ ಅಡ್ಡಗಟ್ಟಿ ಇಬ್ರಾಹಿಂ ಗೌಸ್ ನನ್ನು ಸ್ಕ್ರೂಡ್ರೈವರ್ ನಿಂದ ಇರಿದು ಪರಾರಿಯಾಗಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹಿಂ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಇಬ್ರಾಹಿಂ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಒಂದೇ ಗಲ್ಲಿಯಲ್ಲಿ ವಾಸವಾಗಿದ್ದ ಯುವತಿ ಹಾಗೂ ಇಬ್ರಾಹಿಂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಲವು ಬಾರಿ ಪಂಚಾಯಿತಿ ಮಾಡಿದ್ದರೂ ಯುವಕ ಕೇಳಿರಲಿಲ್ಲ. ಇಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು ಎಂದು ತಿಳಿದು ಬಂದಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.