ಪ್ರಗತಿವಾಹಿನಿ ಸುದ್ದಿ, ದಿಸ್ಪುರ: 16 ವರ್ಷದ ತನ್ನ ಪ್ರೇಮಿಯನ್ನು ಅಪಹರಿಸಿ ಅತ್ಯಾಚಾರಗೈದ ಯುವಕನೊಬ್ಬ ಆಕೆಯನ್ನು ಬ್ಯಾಗ್ ಒಂದರಲ್ಲಿಟ್ಟು ಕಾಡಿಗೆ ಎಸೆದ ಘಟನೆಯೊಂದು ಬೆಳಕಿಗೆ ಬಂದಿದೆ.
ಆಸ್ಸಾಂ ರಾಜ್ಯದ ಕ್ಯಾಚಾರ್ ಜಿಲ್ಲೆಯ ಸಂಜಯ ತೇಲಿ (26) ಆರೋಪಿಯಾಗಿದ್ದು ಈತ ಚಹಾ ತೋಟದ ಕೆಲಸಗಾರನಾಗಿದ್ದ. ಬಾಲಕಿಯ ಆರಂಭಿಕ ಹೇಳಿಕೆಯ ಆಧಾರದ ಮೇಲೆ ಬೋರ್ಖೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.
ನೊಂದ ಬಾಲಕಿ ಆರೋಪಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆರೋಪಿ ಸಂಜಯ ಆಕೆಯನ್ನು ಅಪಹರಿಸಿ ಕರೆದೊಯ್ದು ಅತ್ಯಾಚಾರಗೈದಿದ್ದಲ್ಲದೆ, ಅವಳ ಕತ್ತು ಸೀಳುವ ಪ್ರಯತ್ನ ಮಾಡಿದ್ದಾನೆ. ಇಷ್ಟಕ್ಕೇ ಬಿಡದೆ ಅವಳನ್ನು ಬ್ಯಾಗ್ ಒಂದರಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದನೆನ್ನಲಾಗಿದೆ.
ಆದರೆ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಚಿಂದಿ ಬಟ್ಟೆಗಳ ಮೇಲೇ ಮನೆಗೆ ಬಂದಿದ್ದಾಳೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಆಕೆ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಕ್ಟೋಬರ್ 3ರಂದು ದುರ್ಗಾ ಪೂಜೆಗೆ ಹೋಗಿದ್ದ ಬಾಲಕಿ ಮರಳಿ ಮನೆಗೆ ಬಂದಿರಲಿಲ್ಲ. ಕುಟುಂಬದವರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮರುದಿನವೇ ಮಧ್ಯಾಹ್ನ ಬಾಲಕಿ ಮನೆಗೆ ಮರಳಿದ್ದಳು.
ಬಾಲಕಿ ಸಂಪೂರ್ಣ ಚೇತರಿಸಿಕೊಳ್ಳುತ್ತಲೇ ಆಕೆಯ ಹೇಳಿಕೆಗಳನ್ನು ಪಡೆಯಲಾಗುವುದು ಎಂದು ಪೊಲೀಸ್್ ಅಧಿಕಾರಿಗಳು ತಿಳಿಸಿದ್ದಾರೆ.
ಸೀರೆ, ಬಿಂದಿ ಧರಿಸಿದ ಮಹಿಳೆಯರ ಮೇಲೆ ವ್ಯಕ್ತಿ ಆಕ್ರಮಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ