Kannada NewsKarnataka NewsLatest

ಫೆಸಬುಕ್ ಲೈವ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಫೆಸಬುಕ್ ಲೈವ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಮನೆಯವರು ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿ ಯುವಕನೋರ್ವ ಫೇಸ್ ಬುಕ್ ಲೈವ್ ನಲ್ಲೇ ವಿಷ ಸೇವಿಸಿದ್ದಾನೆ.
ಗೋಕಾಕ ತಾಲೂಕಿನ ಅರಬಾವಿಯ ಪ್ರವೀಣ ಎಂಬಾತ ಫೇಸ್ ಬುಕ್ ಲೈವ್ ನಲ್ಲಿ ಬಂದು ವಿಷ ಸೇವಿಸಿದ್ದಾನೆ. ತಾನು ಓರ್ವ ಹುಡುಗಿಯನ್ನು ಪ್ರೀತಿಸಿದ್ದು ಮದುವೆಯಾಗಲು ಹುಡುಗಿಯ ಸಂಬಂಧಿಕರು ಒಪ್ಪುತ್ತಿಲ್ಲ. ನನ್ನ ಸಾವಿಗೆ ಹುಡುಗಿಯ ಸಂಬಂಧಿಕರೇ ಕಾರಣ ಎಂದು ಹೇಳಿ ವಿಷ ಸೇವಿಸಿದ್ದಾನೆ. ತನಗೆ ತಿರುಕುಳ ನೀಡುತ್ತಿದ್ದಾರೆಂದು ಕೆಲವರ ಹೆಸರನ್ನೂ ಆತ ಹೇಳಿದ್ದಾನೆ.
 ಪ್ರವೀಣ ಅದೇ ಗ್ರಾಮದ  ಯುವತಿಯನ್ನು 4 ವರ್ಷಗಳಿಂದ ಪ್ರೀತಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.
ಯುವತಿಯೂ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.
ನಾನು ಪ್ರವೀಣನನ್ನು ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಸಿದ್ದ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಾಳೆ.
 ಅಸ್ವಸ್ಥ ಪ್ರವೀಣನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
https://m.facebook.com/story.php?story_fbid=2365979540333177&id=100007634626001&sfnsn=scwspwa&funlid=LYOK1jSCfQtpSJsy

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button