Latest

ಟಿವಿ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದ ಮಗ; ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸದಾಕಾಲ ಟಿವಿ ನೋಡುವುದರಲ್ಲೇ ನಿರತನಾಗಿದ್ದ ಮಗನಿಗೆ ಬುದ್ಧಿ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜೆ.ಜೆ.ನಗರದಲ್ಲಿ ನಡೆದಿದೆ.

23 ವರ್ಷದ ಸೈಯದ್ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಯಾವಾಗಲು ಮನೆಯಲ್ಲಿಯೇ ಟಿವಿ ನೋಡುತ್ತಾ ಇರುತ್ತೀಯಾ. ಟಿವಿ ನೋಡೋದು ಬಿಟ್ಟು ಕೆಲಸ ಮಾಡು, ದುಡಿಯಲು ಹೋಗು. ಅದರನ್ನು ಬಿಟ್ಟು ಮನೆಯಲ್ಲಿಯೇ ಕುಳಿತು ಟಿವಿ ನೋಡಿಕೊಂಡು ಕುಳಿತರೆ ಹೇಗೆ? ಎಂದು ಸೈಯದ್ ತಂದೆ ಮಗನಿಗೆ ಬುದ್ಧಿ ಹೇಳಿದ್ದಾರೆ. ಇದೇ ಕಾರಣಕ್ಕೆ ಯುವಕ ಮನೆಯಲ್ಲಿ ಜಗಳವಾಡಿದ್ದಾನೆ.

ಬಳಿಕ ರಿಮೋಟ್ ಬಿಸಾಕಿ ನೇರವಾಗಿ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ತನಗೆ ತಾನೇ ಇರುದುಕೊಂಡಿದ್ದಾನೆ. ಪೋಷಕರು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಯುವಕ ಕೊನೆಯುಸಿರೆಳೆದಿದ್ದಾನೆ. ಜೆ.ಜೆ.ನಗರ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.
ಬ್ಲ್ಯಾಕ್ ಮೇಲ್ ಪ್ರಕರಣ; ನನ್ನ ಪುತ್ರಿಯ ಪಾತ್ರವಿಲ್ಲ ಎಂದ ಇಂಡಿ ಶಾಸಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button