Belagavi NewsBelgaum NewsKannada NewsKarnataka NewsLatest

*ಚಲಿಸುತ್ತಿದ್ದ ರೈಲಿನಿಂದ ಜಿಗಿದ ಯುವಕ… ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಜಿಗಿದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ರೈಲು ನಿಲ್ದಾಣದ ಮೊದಲನೆಯ ಗೆಟ್ ಹತ್ತಿರ ನಡೆದಿದೆ.

ಬೆಳಗಾವಿಯಿಂದ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲಿನಲ್ಲಿ ಘಟಪ್ರಭಾಗೆ ಹೊರಟಿದ್ದ ಪಾಮಲದಿನ್ನಿ ಗ್ರಾಮದ ಯುವಕ ವಿಠ್ಠಲ್ ಗುಜನಟ್ಟಿ (18) ರೈಲಿನಲ್ಲಿ ನಿದ್ದೆಗೆ ಜಾರಿದ್ದಾನೆ. ಎಚ್ಚರವಾಗುವಷ್ಟರಲ್ಲಿ ರೈಲು ಘಟಪ್ರಭಾ ರೈಲುನಿಲ್ದಾಣದಿಂದ ಮುಂದೆ ಸಾಗಿದೆ. ತಕ್ಷಣ ಯುವಕ ರೈಲ್ವೆ ಗೇಟ್ ಬಳಿ ರೈಲು ತಲುಪುತ್ತಿದ್ದಂತೆ ರೈಲಿನಿಂದ ಜಿಗಿದೇ ಬಿಟ್ಟಿದ್ದಾನೆ.

ರೈಲಿನಿಂದ ಕೆಳಗೆ ಬಿದ್ದ ಹೊಡೆತಕ್ಕೆ ಗಂಭೀರವಾಗಿ ಗಾಯಗೊಂಡಿರುವ ಯುವಕ ಪ್ರಜ್ಞೆ ಕಳೆದುಕೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳೀಯರು ಹಾಗೂ ಕುಟುಂಬಸ್ಥರು ಕೊಡಲೇ 108 ಆಂಬುಲೆನ್ಸ್ ಗೆ ಕರೆ ಮಾಡಿ ಆಂಬುಲೆನ್ಸ್ ಮೂಲಕ ಗೋಕಾಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ .

Home add -Advt

ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button