Film & EntertainmentLatest

*ಸೀರಿಯಲ್ ನಟಿ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾದ ಯುವಕ: ಕಿರುತೆರೆ ನಟಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಧಾರಾವಾಹಿ ನಟಿಯ ವ್ಯಾಮೋಹದಿಂದಾಗಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮದನ್ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಯುವಕನ ತಾಯಿ ನೀಡಿರುವ ದೂರಿನ ಮೇರೆಗೆ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರುತೆರೆ ನಟಿ ವೀಣಾ ವಿರುದ್ಧ ಎಫ್ಐ ಆರ್ ದಾಖಲಾಗಿದೆ.

Home add -Advt

ಕನ್ನಡತಿ, ಜನನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ವೀಣಾ (24) ಎಂಬ ನಟಿಯ ಪ್ರೇಮಕ್ಕೆ ಸಿಲುಕಿ ಮದನ್ ಆತ್ಮಹತ್ಯೆ ಮಡಿಕೊಂಡಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಸಾಯಿಸಮೃದ್ಧಿ ಲೇಔಟ್ ನ ಮನೆಯಲ್ಲಿ ವೀಣಾ ಒಬ್ಬರೇ ವಾಸವಾಗಿದ್ದರು. ಒಂದು ವರ್ಷದ ಹಿಂದೆ ವೀಣಾಳಿಗೆ ಮದನ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿದೆ. ಇದೇ ಸ್ನೇಹದಿಂದ ವೀಣಾ ಮದನ್ ಗೆ ಪ್ರೀತಿಸುವಂತೆ ಒತ್ತಾಯಿಸಿದ್ದಳು ಎಂಬ ಆರೋಪ ಕೇಳಿಬಂದಿದೆ.

ಮನೆ ಬಳಿ ಬಂದು ರಂಪಾಟ ಮಾಡುತ್ತಿದ್ದಳಂತೆ. ಬ್ಲೇಡ್ ನಿಂದ ಕೈ ಕುಯ್ದುಕೊಂಡು ಗಲಾಟೆ ಮಾಡಿದ್ದಳಂತೆ. ಅ.1ರಂದು ವೀಣಾ ಮದನ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಕುಡಿದು ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ. ಕಿರುಕುಳಕ್ಕೆ ಬೇಸತ್ತು ಮದನ್ ರೂಮ್ ನಲ್ಲಿ ನೆಣಿಗೆ ಕೊರಳೊಡ್ಡಿದ್ದಾನೆ ಎಂದು ಮದನ್ ಕುಟುಬದವರು ಆರೋಪಿಸಿದ್ದಾರೆ.

ನಟಿ ವೀಣಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.


Related Articles

Back to top button