ಯುವ ಪ್ರಜೆಗಳೆ ನಾಳಿನ ವೀರ ಯೋಧರು
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕೆ.ಎಲ್.ಇ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಜುಲೈ 26 ಭಾರತೀಯರೆಲ್ಲ ಹೆಮ್ಮೆ ಪಡುವ ದಿನವಾದ ‘ಕಾರ್ಗಿಲ್ ವಿಜಯದ ದಿವಸ’ವನ್ನು ಆಚರಿಸಲಾಯಿತು. ಭಾರತದ ಪರವಾಗಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಯೋಧರ ಕುರಿತು ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯ ಮತ್ತು ಅದರ ಪಾತ್ರದ ಕುರಿತು ಉಪನ್ಯಾಸಕರಾದ ಅಪೇಕ್ಷಾ ಗುಪ್ತೆ ಮಾತನಾಡಿದರು.
ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆದ ಒಂದು ಕದನ. ಇದು ನಡೆದು ಇಂದಿಗೆ 20 ವರ್ಷವಾಯಿತು.
ಯುವ ಜನತೆಗೆ ಕಾರ್ಗಿಲ್ ಯುದ್ಧದ ಕುರಿತು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರಪ್ರಜ್ಞೆ ಮತ್ತು ದೇಶಕಾಯುವ ಯೋಧರ ಜೀವನದ ಮಹತ್ವವನ್ನು ತಿಳಿಸುವ ಮೂಲಕ ವಿದ್ಯಾರ್ಥಿಯಾಗಿದ್ದುಕೊಂಡು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುವಂತೆ ಮಾತನಾಡಿದ ಬಿ.ಕಾಂ ಕೊನೆಯ ವರ್ಷದ ವಿದ್ಯಾರ್ಥಿಗಳಾದ ಕುಮಾರಿ ವರ್ಷಾ ಪಾಟೀಲ ಮತ್ತು ಕುಮಾರಿ ಸಿಂಥಿಯಾ ಫ್‌ರ್ನಾಂಡಿಸ್ ಮಾತನಾಡಿದರು.
ಕಾರ್ಗಿಲ್ ಯುದ್ಧದ ಸಾಕ್ಷ್ಯ ಚಿತ್ರವನ್ನು ತೊರಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅವರನ್ನು ಭಾವೋತ್ಮಕವಾಗುವಂತೆ ಮಾಡಲಾಯಿತು.
ಬಿ.ಕಾಂ ವರ್ಷದ ವಿದ್ಯಾರ್ಥಿಗಳಾದ ನಿಧಿ, ಆಸಾವರಿ ಮತ್ತು ಸಂಗಡಿಗರಿಂದ ದೇಶಭಕ್ತಿ ಗೀತೆಯನ್ನು ಹಾಡಿದರು. ಬಿ.ಕಾಂ ಎರಡನೇ ವರ್ಷದ ವಿದ್ಯಾರ್ಥಿಗಳಾದ ಕುಮಾರಿ ಭುವನೇಶ್ವರಿ ಸ್ಥಾವರಮಠ ಹಾಗೂ ಕೋಮಲ ಅಂಬಿಗೇರ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಈ ಕಾರ್ಯಕ್ರಮದ ಉಸ್ತುವರಿಯನ್ನು ಪ್ರೊ.ದೀಪಾ ಅಂಗಡಿ ಅವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು, ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ