ಪ್ರಗತಿವಾಹಿನಿ ಸುದ್ದಿ; ಮುಂಬೈ: ಅನಾರೋಗ್ಯದಿಂದ ಅಣ್ಣ ವಿಧಿವಶನಾದ ಹಿನ್ನೆಲೆಯಲ್ಲಿ ವಿಧವೆ ಅತ್ತಿಗೆಯನ್ನು ತಮ್ಮನೇ ವಿವಾಹವಾಗಿರುವ ಘಟನೆ ಮಹಾರಾಷ್ಟ್ರದ ಬುಲ್ದಾನದಲ್ಲಿ ನಡೆದಿದೆ.
ಹರಿದಾಸ್ ದಮಧರ್ ಎಂಬುವವರ ಅಣ್ಣ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳು ಕಂಗಾಲಾಗಿದ್ದರು. ಪತಿ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಅತ್ತಿಗೆಯನ್ನೆ ವಿವಾಹವಾಗಿ ಬಾಳು ಕೊಡುವಂತೆ ಹರಿದಾಸ್ ಗೆ ಕುಟುಂಬದವರು ಸಲಹೆ ನೀಡಿದ್ದರು.
ಇದಕ್ಕೆ ಅತ್ತಿಗೆಯೂ ಸಮ್ಮತಿ ಸೂಚಿಸಿದ್ದಾಳೆ ಎನ್ನಲಾಗಿದೆ. ಇದೀಗ ಅತ್ತಿಗೆಯನ್ನೇ ವಿವಾಹವಾಗಿರುವ ಹರಿದಾಸ್ ಹೊಸ ಜೀವನ ಆರಂಭಿಸಿದ್ದಾನೆ.
ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್? ಗೃಹ ಸಚಿವರಿಗೆ ದೂರು ನೀಡಿದ ಜಯ ಕರ್ನಾಟಕ ಸಂಘಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ