Kannada NewsKarnataka News

ಗೋಮಾತೆ ಪೂಜೆಯೊಂದಿಗೆ ಮತದಾನ ಪ್ರಾರಂಭಿಸಿದ ಯುವಕರು

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಅದ್ಧೂರಿಯ ಹಬ್ಬದಂತೆ ಮುಂದುವರಿದಿದೆ. ಜನ ಪರಮಾಧಿಕಾರದ ಚಲಾವಣೆಗೆ ಸಂಭ್ರಮದಿಂದ ಸಿದ್ಧರಾಗಿ ಮತಗಟ್ಟೆಯತ್ತ ತೆರಳುತ್ತಿದ್ದಾರೆ. ಅನೇಕ ಜನ ತಮ್ಮ ನಿಷ್ಠೆಯುಳ್ಳ ಪಕ್ಷ, ಅಭ್ಯರ್ಥಿಯ ಗೆಲುವಿಗಾಗಿ ಮತದಾನಕ್ಕೆ ಮುನ್ನ ನಾನಾ ರೀತಿಯ ಭಾವನಾತ್ಮಕ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

ಅಂತೆಯೇ ತಾಲೂಕಿನ ಬಸಾಪುರ ಗ್ರಾಮದಲ್ಲಿ ಕೆಲ ಯುವಕರು ಗೋ ಮಾತೆಯ ಪೂಜೆಯೊಂದಿಗೆ ಮತದಾನ ಪ್ರಾರಂಭಿಸಿ ಹೊಸತನ ಮೆರೆದಿದ್ದಾರೆ.

ಬೆಳಗ್ಗೆ ಗೋವಿಗೆ ಹೂಮಾಲೆ, ಕೇಸರಿ ಶಲ್ಯ ತೊಡಿಸಿ ಅರಿಷಿಣ ಕುಂಕುಮವಿಟ್ಟು ಶಾಸ್ತ್ರೋಕ್ತ ಪೂಜೆ ಸಲ್ಲಿಸಿದ ಬಳಿಕ ಯುವಕರು ಮತದಾನ ಪ್ರಕ್ರಿಯೆಗೆ ತೆರಳಿ ಪರಮಾಧಿಕಾರ ಚಲಾಯಿಸಿದರು.

ಯುವ ಮುಖಂಡರಾದ ಜಗದೀಶ ಪೂಜೇರಿ, ಪ್ರಕಾಶ ಪೂಜೇರಿ, ಬಸನಗೌಡ ಪಾಟೀಲ, ಚಂದ್ರಶೇಖರ ಚಚಡಿ, ರಾಮನಗೌಡ ಪಾಟೀಲ, ಹಿರಿಯರಾದ ನಿಂಗಪ್ಪ ಗುರುವಣ್ಣವರ ಮತ್ತಿತರರು ಭಾಗವಹಿಸಿದ್ದರು.

https://pragati.taskdun.com/vidhanasabha-electionvoting20-99/
https://pragati.taskdun.com/old-woman-outraged-protesting-in-front-of-the-polling-station/

https://pragati.taskdun.com/denial-of-voting-to-rajamata-without-voter-slip-what-did-you-finally-do/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button