
ಪ್ರಗತಿ ವಾಹಿನಿಸುದ್ದಿ; ಬೆಳಗಾವಿ: ಬೆಳಗಾವಿಯ ಮಚ್ಚೆಯಲ್ಲಿ ಕೆಎಸ್ ಆರ್ ಪಿ ಬಳಿ ಯುವಕನೊಬ್ಬ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆ ಪಕ್ಕದಲ್ಲಿ ನರಳುತ್ತ ಬಿದ್ದಿದ್ದನ್ನು ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ವಿಜಯ ಮೋರೆ ಮತ್ತು ಅವರ ಪತ್ನಿ ಮಾರಿಯಾ ಮೋರೆ ಅವರು ನೋಡಿ ಗಾಯಾಳು ಯುವಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಿಂದ ರಸ್ತೆ ಪಕ್ಕದಲ್ಲಿ ಬಿದ್ದು, ನರಳಾಡುತ್ತಿದ್ದ ಯುವಕನನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಾಜಿ ಮೇಯರ್ ವಿಜಯ ಮೊರೆ ಹಾಗೂ ಅವರ ಪತ್ನಿ ಮಾರಿಯಾ ಗಮನಿಸಿದ್ದಾರೆ. ತಕ್ಷಣ ಯುವಕನನ್ನು ಸ್ಥಳೀಯ ಯುವಕರ ಸಹಕಾರದಿಂದ ವೇಣುಗ್ರಾಮ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ.
ಗಾಯಾಳು ಯುವಕ ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಬೋಗಾರವೇಸ್ ನಲ್ಲಿ ಅದ್ದೂರಿ ಗಣೇಶೋತ್ಸವ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕಾಂಗ್ರೆಸ್ ನಾಯಕರು ಭಾಗಿ
https://pragati.taskdun.com/latest/belagaviganeshotsavalakshmi-hebbalkar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ