Belagavi NewsBelgaum NewsKannada NewsKarnataka NewsTravel

*ಬೆಳಗಾವಿ ನಗರದಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಪ್ರಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು/ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ 4(ನಾಲ್ಕು) ಮಾರ್ಗಗಳಲ್ಲಿ ಪ್ರಸ್ತುತ ಸಾರಿಗೆ ಸುತ್ತುಗಳೊಂದಿಗೆ ಹೆಚ್ಚುವರಿ ಸಾರಿಗೆ ಸುತ್ತುಗಳನ್ನು ಅಳವಡಿಸಿ, ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಸದರಿ ಸಾರಿಗೆಗಳ ಮಾರ್ಗಗಳ ವಿವರ: 

Home add -Advt

ಸಿ.ಬಿ.ಟಿಯಿಂದ 8.30 ಗಂಟೆಗೆ ಪ್ರಾರಂಭವಾಗಿ 19.45 ಗಂಟೆಗೆ ವಂಟಮೂರಿಗೆ ಮುಕ್ತಾಯ, ವ್ಹಾಯಾ ಆರ್‌ಟಿಓ ವೃತ್ತ, ಸುಭಾಶ ನಗರ ಶ್ರೀ ಸಾಯಿ ಅಪಾರ್ಟಮೆಂಟ, ಶ್ರೀನಗರ ಗಾರ್ಡನ, ವಂಟಮೂರಿ, ಆಶ್ರಯ ಕಾಲೋನಿ ಮೂಲಕ ಪ್ರತಿ ದಿನ 14 ಹೆಚ್ಚುವರಿ ದುಂಡು ಸುತ್ತುಗಳು. 

ಸಿಬಿಟಿಯಿಂದ 8.30 ಗಂಟೆಗೆ ಪ್ರಾರಂಭವಾಗಿ 19.30 ಗಂಟೆಗೆ ಕಣಬರ್ಗಿ ಮುಕ್ತಾಯ ವ್ಹಾಯಾ ಮಹಾಂತೇಶ ನಗರ ಕ್ರಾಸ್-ಸುರಬಿ ಪ್ರತಿ ದಿನ 7 ಹೆಚ್ಚುವರಿ ದುಂಡು ಸುತ್ತುಗಳು. 

ಕೆ.ಎಲ್.ಇ ಯಿಂದ 8.30 ಗಂಟೆಗೆ ಪ್ರಾರಂಭವಾಗಿ 19.30 ಗಂಟೆಗೆ ರೇಲ್ವೆ ನಿಲ್ದಾಣಕ್ಕೆ ಮುಕ್ತಾಯ, ವ್ಹಾಯಾ ರಾಮದೇವ-ಕಿ.ಚ.ವೃತ್ತ-ಧ.ವೀ.ಸಂ ವೃತ್ತ ಪ್ರತಿ ದಿನ 6 ಹೆಚ್ಚುವರಿ ದುಂಡು ಸುತ್ತುಗಳು. ಸಿಬಿಟಿಯಿಂದ 8. ಗಂಟೆಗೆ ಪ್ರಾರಂಭವಾಗಿ 19.30 ಗಂಟೆಗೆ ಕಾಕತಿಗೆ ಮುಕ್ತಾಯ ವ್ಹಾಯಾ ಕಿ.ಚ.ವೃತ್ತ-ರಾಮದೇವ-ಕೆಎಲ್‌ಇ-ಯಮನಾಪೂರ ಪ್ರತಿ ದಿನ 9 ಹೆಚ್ಚುವರಿ ದುಂಡು ಸುತ್ತುಗಳು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಸೌಲಭ್ಯವನ್ನು ಪಡೆದು ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ವಾಕರಸಾಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button