ಹೆತ್ತವರ ಎದುರೇ ನೀರುಪಾಲಾದ ಯುವಕರು- ದುಃಖದಲ್ಲಿ ಗ್ರಾಮ
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಯುವಕರಿಬ್ಬರು ನೀರು ಪಾಲಾಗುತ್ತಿದ್ದಂತೆ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿತು. ಇಷ್ಟು ದೊಡ್ಡ ಶಾಕ್ ಗ್ರಾಮವನ್ನು ಕಣ್ಣೀರಲ್ಲಿ ತೇಲಿಸಿತು.
ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕೆರೆಯ ಬಳಿ ಸಾಗರ ಮತ್ತು ಓಂಕಾರ ಅವರ ಹೆತ್ತವರು ಮತ್ತು ಸಂಬಂಧಿಗಳು ಉಪಸ್ಥಿತರಿದ್ದರು. ಹೆತ್ತವರ ಮುಂದೆಯೇ ಇಬ್ಬರೂ ಮಕ್ಕಳು ದುರ್ಮರಣಕ್ಕೀಡಾಗಿದ್ದು, ಕೆರೆಯ ಬಳಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಅರವಿಂದ ಪಾಟೀಲ ಭೇಟಿ ನೀಡಿ ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿದರು. ಜೊತೆಗೆ ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಗ್ರಾಮದಲ್ಲಿ ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಮೃತರ ಕುಟುಂಬದಲ್ಲಿ ಮಡುಗಟ್ಟಿದ ದುಃಖದಲ್ಲಿ ಇಡೀ ಬೆಟಗೇರಿ ಗ್ರಾಮಸ್ಥರು ಭಾಗಿಯಾಗಿದ್ದರು. ಮೃತರ ಕಳೇಬರಗಳನ್ನು ಕೆರೆಯಿಂದ ಹೊರತೆಗೆಯಲು ಇಡೀ ಗ್ರಾಮದ ಯುವಕರು ಕೈ ಜೋಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ