Belagavi NewsBelgaum NewsKannada NewsKarnataka News

*ಉಳುಮೆ ಮಾಡುವಾಗ ವಿದ್ಯುತ್ ತಗುಲಿ ಯುವಕ ಬಲಿ: ತಂದೆ ಸ್ಥಿತಿ ಚಿಂತಾಜನಕ*

ಪ್ರಗತಿವಾಹಿನಿ ಸುದ್ದಿ: ಟ್ರ್ಯಾಕ್ಟರ್ ಮೂಲಕ ಜಮೀನನಲ್ಲಿ ಉಳುಮೆ ಮಾಡುವಾಗ ಅವಘಡ ಸಂಭವಿಸಿದೆ‌. ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದು, ಯುವನಕ ತಂದೆ ಸ್ಥಿತಿ ಚಿಂತಾಜನಕವಾಗಿದೆ. 

ಈ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಸನಾಳ ಗ್ರಾಮದಲ್ಲಿ ಸಂಭವಿಸಿದ್ದು, ಮೃತನನ್ನು ರಾಜನ ಹರಿಶ್ಚಂದ್ರ ನಾಯ್ಕ (33) ಎಂದು ಗುರುತಿಸಲಾಗಿದೆ. ತಂದೆ ಹರಿಶ್ಚಂದ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನೊಂದಿಗೆ ತಂದೆ ಕೂಡ ಜಮೀನನಲ್ಲಿ ಉಳುಮೆ ಮಾಡುತ್ತಿದ್ದರು, ಮಗ ರಾಜನ ಟ್ರ್ಯಾಕ್ಟರ್ ಮೂಲಕ ಜಮೀನನಲ್ಲಿ ಸಾಲುಗಳನ್ನು ಕೊರೆಯುವ ಸಂದರ್ಭದಲ್ಲಿ ವಿದ್ಯುತ್ ಕಂಬದ ತಂತಿ ಕಳಚಿ ಬಿದ್ದಿದೆ.

ಇದನ್ನು ಗಮನಿಸದ ರಾಜನ ಉಳಿಮೆಯಲ್ಲಿ ಮಗ್ನರಾಗಿದ್ದಾರೆ. ಏಕಾಏಕಿ ವಿದ್ಯುತ್ ತಗಲಿದೆ. ಮಗನನ್ನು ಕಾಪಾಡಲು ಹೋದ ತಂದೆಗೂ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button