Karnataka NewsLatest

ಯುವ ಉತ್ಸವ: ಯುವಕ, ಯುವತಿಯರಿಗಾಗಿ ವಿವಿಧ ಸ್ಪರ್ಧೆಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ  ಭಾರತ ಸರಕಾರ ನೆಹರು ಯುವ ಕೇಂದ್ರದ ವತಿಯಿಂದ ದಿನಾಂಕ ಜೂ.15 2023 ರಂದು ಬೆಳಗ್ಗೆ 9.30ಕ್ಕೆ ನಗರದ ಜೆ.ಎನ್.ಎಂ.ಸಿ ಯ ಡಾ ಬಿ.ಎಸ್. ಕೋಡಕಣಿ ಸಭಾ ಭವನದಲ್ಲಿ ಯುವ ಉತ್ಸವ 2023   ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ಕಾರ್ಯಕ್ರಮದಲ್ಲಿ ಪೇಟಿಂಗ್ (ಚಿತ್ರಕಲೆ) ಸ್ಪರ್ಧೆ, ಕವನ/ಕವಿತೆ ಬರವಣಿಗೆ, ಮೊಬೈಲ್ ಪೋಟೋಗ್ರಾಫಿ (ಛಾಯಾಚಿತ್ರ), ಸಾಂಸ್ಕೃತಿಕ ಜಾನಪದ ಮತ್ತು ಸಾಂಪ್ರದಾಯಕ ನೃತ್ಯ, ಭಾಷಣ, ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

 ಈ ಸ್ಪರ್ಧೆಗಳಲ್ಲಿ 03 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಭಾಗವಹಿಸಿದ ಎಲ್ಲ ಯುವಕ/ಯುವತಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

 ಆಸಕ್ತ ಅಭ್ಯರ್ಥಿಗಳು 15 ರಿಂದ 29 ವಯಸ್ಸಿನೊಳಗೆ ಇರಬೇಕು.  ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ ಕಾರ್ಡ್ ನಕಲು ಪ್ರತಿಯನ್ನು ತಪ್ಪದೇ ತರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ. 0831-2453496 ಮೊ.ಸಂ 9620646488, 9053708116 ಗೆ ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ್ ಕಲ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button