Belagavi NewsBelgaum NewsKannada NewsKarnataka News
ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿದ ಯುವ ಮುಖಂಡ ಮೃಣಾಲ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಕ್ಷೇತ್ರದ ಮಣ್ಣೂರು ಗ್ರಾಮದ ಧರ್ಮ ರಕ್ಷಕ್ ಗ್ರುಪ್ ವತಿಯಿಂದ ನವರಾತ್ರಿಯ ಪ್ರಯುಕ್ತ ಆಯೋಜಿಸಲಾಗಿದ್ದ ವಾಲಿಬಾಲ್ ಸ್ಪರ್ಧೆಯನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.

ಕೆಲ ಹೊತ್ತು ಸ್ವತಃ ವಾಲಿಬಾಲ್ ಆಡಿದ ಮೃಣಾಲ ಹೆಬ್ಬಾಳಕರ್, ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗ್ರಾಮೀಣ ಕ್ರೀಡೆಗಳಿಗೆ ಸದಾ ಬೆಂಬಲ ನೀಡುತ್ತ ಬಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಶೋಕ ಚೌಗಲೆ, ವಿಶ್ವನಾಥ ಚೌಗಲೆ, ಮಹದೇವ ದೋನಕರಿ, ಅಭಿಷೇಕ ಕಾಕತ್ಕರ್, ಸ್ವರಾಜ ಚೌಗಲೆ, ಮಯೂರ ಚೌಗಲೆ, ಸರಿತಾ ನಾಯ್ಕ್, ಲತಾ ಕಡೋಲ್ಕರ್, ಲಕ್ಷ್ಮೀ ಸಾಂಬ್ರೇಕರ್, ರಾಮ ಚೌಗಲೆ, ಪುಂಡಲೀಕ್ ಬಾಂದುರ್ಗೆ, ಎಸ್ ಎಲ್ ಚೌಗಲೆ, ಮನು ಬೆಳಗಾಂವ್ಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ