Kannada NewsLatest

ಈಜಲು ಹೋದ ಯುವಕ ನೀರುಪಾಲು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಮೀನಗಡ ಸಮೀಪದ ರಾಮತ್ನಾಳ ಬ್ರಿಜ್ ಕಂ ಬ್ಯಾರೇಜ್ ನಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕನೊಬ್ಬ ನೀರುಪಾಲಾದ ಘಟನೆ ಬೆಳಕಿಗೆ ಬಂದಿದೆ.

ಆರು ಜನ ಸ್ನೇಹಿತರ ಜೊತೆಗೂಡಿ ತೆರಳಿದ್ದ ಯುವಕ ಈಜುವಾಗ ನೀರಿನ ಸೆಳೆತಕ್ಕೆ ನೀರಿನ ಮುಳುಗಿ ಮೃತಪಟ್ಟಿದ್ದಾನೆ. ಮೃತ ಯುವಕನು ಅಮೀನಗಡದ ಕುಂಬಾರ ಓಣೆಯ ಮಲ್ಲು ಲಕ್ಷ್ಮಣ್ ಹುಣಸಿಹಾಳ (25) ಎಂದು ಗುರುತಿಸಲಾಗಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತದೇಹಕ್ಕಾಗಿ ನೀರಿನಲ್ಲಿ ಶೋಧ ನಡೆಸಿದ್ದಾರೆ. ಆದರೆ ನಿನ್ನೆ ಸಾಯಂಕಾಲವಾದರೂ ಮೃತದೇಹ ಪತೆಯಾಗಿರಲಿಲ್ಲ. ಕಲ್ಲುಗಳ ಸಂಧಿಗಳಲ್ಲಿ ಶವ ಸಿಲುಕಿ ಕೊಂಡಿರುವುದರಿಂದ ಮತ್ತು ನೀರಿನ ಸೆಳತ ಬಹಳ ಇದ್ದಿದ್ದರಿಂದ ಶವ ಹೊಸತೆಗೆಯಲು ಸಾಧ್ಯವಾಗಿರಲಿಲ್ಲ.

ಇಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಹಾಗೂ ಇಳಕಲ್ಲ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ತಂಡ ಯುವಕನ ಶವವನ್ನು ಪತ್ತೆಹಚ್ಚಿ ಸ್ಥಳೀಯರ ಸಹಾಯದಿಂದ ಶವವನು ನೀರಿನಿಂದ ಹೊರತೆಗೆಯಲಾಗಿದೆ.

Home add -Advt

ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬಸವರಾಜ ರಾಥೋಡ್ ಅಮೀನಸಾಬ ಕಂದಗಲ್ ಮಾರುತಿ ಜಾದವ್ ಲಕ್ಷ್ಮಣ ಹಳ್ಳಿ ಹಳ್ಳಿ ಅಶೋಕ್ ಯಮನೂರಪ್ಪ ಪೂಜಾರಿ ಕೃಷ್ಣ ರಾಠೋಡ್ ಹಾಗೂ ಅನೇಕ ಸ್ಥಳೀಯ ಜನರು ಮೀನುಗಾರರು ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ನಿವೃತ್ತ ತಹಶೀಲ್ದಾರ್ ನಿಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button